ಮುಗಿಯದ ಸೇತುವೆ ಕಾಮಗಾರಿ: ಮಕ್ಕಳ್ಳಿಗೆ ಹಳ್ಳವೇ ದಾರಿ…

0
100

ಮಳೆ ನಿಂತರೂ ಮರದ ಹನಿ ಬಿಡಲಿಲ್ಲ ಎಂಬಂತಾಗಿದೆ ಕರಡಿ ಶಾಲಾ ಮಕ್ಕಳ ಪರಿಸ್ಥಿತಿ

ಇಳಕಲ್ : ತಾಲೂಕಿನ ಕರಡಿ ಗ್ರಾಮದ ಶಾಲೆಯ ಮಕ್ಕಳಿಗೆ ತಮ್ಮ ಶಾಲೆಗೆ ಹೋಗಬೇಕು ಎಂದರೆ ಒಂದಿಲ್ಲೊಂದು ಕಾಟ ತಪ್ಪುವದೇ ಇಲ್ಲ ಎನ್ನುವಂತಾಗಿದೆ.
ದಸರಾ ರಜೆಯ ಮೊದಲು ಸಿಕ್ಕಾಪಟ್ಟೆ ಸುರಿದ ಮಳೆಯಿಂದಾಗಿ ಶಾಲೆಗಳಿಗೆ ಸರ್ಕಸ್ ಮಾಡುತ್ತಾ ಕೆಲವು ದಿನ ಹೋದರೇ ನಂತರ ಕಾಲುವೆ ನೀರಿನಿಂದ ಶಾಲೆಗೆ ಹೋಗಲು ಪರಿದಾಡಿದರು. ದಸರಾ ದೀಪಾವಳಿ ರಜೆ ಮುಗಿಸಿಕೊಂಡು ಈಗ ಮರಳಿ ಶಾಲೆಗೆ ಹೋಗಬೇಕು ಎಂದರೆ ಹಿರೇಸಿಂಗನಗುತ್ತಿ ಕೆರೆಯ ನೀರು ಇವರು ತಿರುಗಾಡುವ ಹಳ್ಳಕ್ಕೆ ಬಂದಿದೆ, ಅದಕ್ಕಾಗಿ ವಿದ್ಯಾರ್ಥಿಗಳು ವಿಶೇಷವಾಗಿ ಹುಡುಗಿಯರು ಯಾವ ರೀತಿಯಲ್ಲಿ ಸರ್ಕಸ್ ಮಾಡುತ್ತಾ ಹೋಗುವ ಸ್ಥಿತಿ ಬಂದಿದೆ ನೋಡಿ. ಮಳೆ ನಿಂತರೂ ಮರದ ಹನಿಗಳ ಕಾಟ ತಪ್ಪಲಿಲ್ಲ ಎಂಬ ಗಾದೆ ಈ ಭಾಗದಲ್ಲಿ ಜನಪ್ರಿಯ ಆಗಿದ್ದು ಅದೇ ಪರಿಸ್ಥಿತಿ ಈಗ ಕರಡಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಬಂದಿದೆ .ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಕರಡಿ ಸೇತುವೆಯ ಕಾಮಗಾರಿ ಯನ್ನು ಆದಷ್ಟು ಬೇಗನೇ ಮುಗಿಯುವಂತೆ ನೋಡಿಕೊಳ್ಳ ಬೇಕಾಗಿದೆ ನಾಲ್ಕು ವರ್ಷಗಳಿಂದ ಅದು ಹೀಗೆ ನಡೆದಿದೆ. ಅದರ ವಿರುದ್ಧ ಧ್ವನಿ ಎತ್ತಬೇಕಾದ ಜನ ಪ್ರತಿನಿಧಿಗಳು ಸುಮ್ಮನೇ ಕೂತರೆ ಶಾಲೆಗೆ ಹೋಗುವ ವಿದ್ಯಾರ್ಥಿಗಳ ಅದರಲ್ಲೂ ಹುಡುಗಿಯರ ಪಾಡೇನು ಎಂಬ ಬಗ್ಗೆ ಯೋಚನೆ ಮಾಡಬೇಕು, ಐದಾರು ಹಳ್ಳಿಗಳ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಅವರ ಸುರಕ್ಷತೆಯ ಬಗ್ಗೆ ಜನಪ್ರತಿನಿಧಿಗಳು ಯೋಜಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Previous articleಹಳಿ ತಪ್ಪಿದ ಎಕ್ಸ್‌ಪ್ರೆಸ್‌ ರೈಲು
Next articleಪ್ರಾಸಿಕ್ಯೂಶನ್ ಅನುಮತಿ ಹಿಂದೆ ದುರುದ್ದೇಶ