ಬಾಗಲಕೋಟೆ:ಯೋಗಗುರು ಬಾಬಾ ರಾಮದೇವರು ಅವರು ದಕ್ಷಿಣ ಕಾಶಿ ಎಂದ್ದೇ ಖ್ಯಾತಿಗಳಿಸಿರುವ ಬಾದಾಮಿ ತಾಲೂಕಿನ ಮಹಾಕೂಟಕ್ಕೆ ಆಗಮಿಸಿದ್ದಾರೆ.ಗುರುವಾರದಿಂದ ಎರಡು ದಿನಗಳ ಪೂಜಾ ಕಾರ್ಯಗಳಲ್ಲಿ ಅವರು ಭಾಗಿಯಾಗಿದ್ದಾರೆ. ಮಹಾಕೂಟದಲ್ಲಿ ೬ ದಿನಗಳ ಶಿವ ಕಲ್ಯಾಣೋತ್ಸವ ಕಾರ್ಯಕ್ರಮ ಜರಗುತ್ತಿದ್ದು, ಅದರಲ್ಲಿ ಭಾಗವಹಿಸುವುಕ್ಕಾಗಿ ಬಾಬಾ ರಾಮದೇವ್ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಶುಕ್ರವಾರದ ಪೂಜೆ ನಂತರ ಅವರು ಹರಿದ್ವಾರಕ್ಕೆ ಮರಳುವರು.