ಮಲ್ಲಿಕಾರ್ಜುನ ಖರ್ಗೆ ಹತ್ಯೆಗೆ ಸಂಚು: ಆಡಿಯೋ ಲೀಕ್‌

0
14

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಹತ್ಯೆಯ ಸಂಚಿಗೆ ಸಂಬಂಧಿಸಿದ ಎನ್ನಲಾದ ಆಡಿಯೋ ಲೀಕ್ ಆಗಿದೆ. ಆಡಿಯೋ ಸಂಬಂಧ ಇಂದು ಎಐಸಿಸಿ ನಾಯಕರಾದ ರಣ್​ದೀಪ್​ ಸುರ್ಜೇವಾಲಾ ಹಾಗೂ ಪವನ್​ ಖೇರಾ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್, ಕಾರ್ಯಕರ್ತ ರವಿ ಎಂಬಾತನ ಜೊತೆ ಮಾತನಾಡಿರುವ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ತೋರುತ್ತಿರುವುದರಿಂದ ಕಂಗೆಟ್ಟಿರುವ ಬಿಜೆಪಿ, ನಾಡಿನ ಮಣ್ಣಿನ ಮಗ ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ಸೇರಿದಂತೆ ಇಡೀ ಕುಟುಂಬವನ್ನೇ ಹತ್ಯೆ ಮಾಡುವ ಸಂಚು ರೂಪಿಸಿದೆ ಎಂದು ಹೇಳಿ ಅದಕ್ಕೆ ಪೂರಕವಾಗಿ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಆಡಿಯೋ ಬಿಡುಗಡೆ ಮಾಡಿದರು. ಆಡಿಯೋದಲ್ಲಿ ಮಣಿಕಂಠ ಬಿಜೆಪಿ ಕಾರ್ಯಕರ್ತ ರವಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಕಂಡು ಬಂದಿದೆ. ಖರ್ಗೆ ಮತ್ತವರ ಹೆಂಡತಿ, ಮಕ್ಕಳ ಮೊಬೈಲ್ ನಂಬರ್ ಇದಿದ್ದರೆ ಅವರ ಇಡೀ ಕುಟುಂಬವನ್ನು ಮುಗಿಸಿ ಬಿಡುತ್ತಿದ್ದೆ ಎಂದು ಮಣಿಕಂಠ ಹೇಳಿರುವುದಾಗಿ ದಾಖಲಾಗಿದೆ.

Previous articleಆಡಿಯೋ ಬಗ್ಗೆ ತನಿಖೆ ಮಾಡುತ್ತೇವೆ
Next articleಕಾರ್ಪೋರೆಟರ್ ಪತಿ ಮೇಲೆ ಗುಂಡಿನ ದಾಳಿ