ಬೆಂಗಳೂರು ಸಮಸ್ಯೆಗಳಿಂದ ಹೊರತಾಗಿಲ್ಲ

0
16

ಬೆಂಗಳೂರು: ಬೆಂಗಳೂರು ನಗರವು ನೆರೆಹೊರೆ ರಾಜ್ಯದ ಜನರನ್ನು ತನ್ನತ್ತ ಸೆಳೆಯುತ್ತಿದೆ. ಆದರೆ ಬೆಂಗಳೂರು ಸಮಸ್ಯೆಗಳಿಂದ ಹೊರತಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆ ಅಡಿ ಬೆಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿ ಕುರಿತಂತೆ ಬೆಂಗಳೂರು ವ್ಯಾಪ್ತಿಯ ಮಾನ್ಯ ಸಚಿವರುಗಳು ಹಾಗೂ ಶಾಸಕರುಗಳ ಜೊತೆ ವಿಧಾನಸೌಧದಲ್ಲಿ ಇಂದು ಹಮ್ಮಿಕೊಂಡಿದ್ದ, ನಾಗರಿಕರ ಧ್ವನಿ-ಅದೇ ಸರ್ಕಾರದ ಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು

ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಿ ನಮ್ಮೆಲ್ಲರಿಗೂ ಸುಂದರ ನಗರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಬೆಂಗಳೂರು, ಅಪಾರವಾದ ಮಾನವಸಂಪನ್ಮೂಲ, ಸಂಸ್ಕೃತಿ, ಉದ್ಯೋಗ, ಹವಾಮಾನದಿಂದ ನೆರೆಹೊರೆ ರಾಜ್ಯದ ಜನರನ್ನು ತನ್ನತ್ತ ಸೆಳೆಯುತ್ತಿದೆ. ಆದರೆ ಬೆಂಗಳೂರು ಸಮಸ್ಯೆಗಳಿಂದ ಹೊರತಾಗಿಲ್ಲ ಕಾವೇರಿ ನೀರಿನ ಸಮಸ್ಯೆ, ಟ್ರಾಫಿಕ್‌, ಕಸದ ನಿರ್ವಹಣೆ, ಕೆರೆಗಳ ನಿರ್ವಹಣೆ ಇತ್ಯಾದಿಗಳನ್ನು ಕುರಿತು ಕೂಲಂಕುಶವಾಗಿ ಚರ್ಚಿಸಲಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ, ಬೆಂಗಳೂರು ಅಭಿವೃದ್ಧಿಯನ್ನು ಪಾರದರ್ಶಕವಾಗಿ ಮಾಡಬೇಕಾಗಿದೆ. ಅತ್ಯುತ್ತಮ ಕಾರ್ಯಕ್ರಮದ ಆಯ್ಕೆಯ ಕುರಿತು ಚರ್ಚಿಸಲಾಗುತ್ತಿದೆ. 70 ಸಾವಿರ ನಾಗರಿಕರು ಈ ಕುರಿತು ಸಲಹೆಗಳನ್ನು ನೀಡಿದ್ದಾರೆ. ಉತ್ತಮ ಯೋಜನೆಗಳನ್ನು ರೂಪಿಸಿ ಜನಪರ ಆಡಳಿತ ನೀಡುವ ಉದ್ದೇಶದಿಂದ ಈ ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು.

Previous articleಅನ್ನ ಯೋಜನೆಯಿಂದ 80 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನ
Next articleಪ್ಯಾರಿಸ್​​ ಒಲಿಂಪಿಕ್ಸ್: ಶೂಟಿಂಗ್‌ ವಿಭಾಗದಲ್ಲಿ ಫೈನಲ್‌ ತಲುಪಿದ ಮನು ಭಾಕರ್‌