ಬಿಜೆಪಿಯ ಮತ್ತೊಂದು ವಿಕೆಟ್ ಪತನ: ಚಿಂಚನಸೂರ ರಾಜೀನಾಮೆ

0
23

ಕಲಬುರಗಿ: ಮಹತ್ತರ ಬೆಳವಣಿಗೆಯೊಂದರಲ್ಲಿ ಮಾಜಿ ಸಚಿವ, ಕೋಲಿ ಸಮಾಜದ ಪ್ರಭಾವಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಾಬುರಾವ ಚಿಂಚನಸೂರ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯರೂ ಆಗಿರುವ ಬಾಬುರಾವ ಅವರು ಬಿಜೆಪಿ ಬಿಡುತ್ತಾರೆಂದು ಕೆಲ ತಿಂಗಳಿನಿಂದಲೂ ವದಂತಿ ಹರಿದಾಡುತ್ತಿದ್ದವು. ಆದರೆ ತಾವು ಬಿಜೆಪಿ ತೊರೆಯುವುದಿಲ್ಲವೆಂದು ಸ್ಪಷ್ಟನೆ ನೀಡುತ್ತಲೇ ಇದ್ದರು. ಆದರೆ ಸೋಮವಾರ ಹಠಾತ್ತನೆ ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಿ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇದರೊಂದಿಗೆ ಬಾಬುರಾವ ಕೊನೆಗೂ ಬಿಜೆಪಿ ತೊರೆದಿದ್ದು ಈಗ ಮತ್ತೆ ಮಾತೃಪಕ್ಷ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲು ಸಜ್ಜಾಗಿದ್ದಾರೆ. ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಹುರಿಯಾಳಾಗಿ ಸ್ಪರ್ಧಿಸುವುದು ಖಚಿತವಾಗಿದೆ.
ಇದರೊಂದಿಗೆ ಬಿಜೆಪಿಯ ಮತ್ತೊಂದು ವಿಕಟ್ ಪತನಗೊಂಡಂತಾಗಿದೆ. ಇತ್ತೀಚೆಗಷ್ಟೇ ಮೇಲ್ಮನೆ ಸದಸ್ಯ ಪುಟ್ಟಣ್ಣ ಸಹ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಬಾಬುರಾವ ಚಿಂಚನಸೂರ ಅವರಿಗೆ ಬಿಜೆಪಿ ಮಹತ್ವದ ಸ್ಥಾನಮಾನಗಳನ್ನೇ ನೀಡಿತ್ತು. ರಾಜ್ಯ ಓಬಿಸಿ ಮೋರ್ಚಾ ಉಪಾಧ್ಯಕ್ಷ ಸ್ಥಾನ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದ ಜೊತೆಗೆ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನೂ ನೀಡಿತ್ತು.

Previous articleಮಾಜಿ ಸಿಎಂಗೆ ಕ್ಷೇತ್ರ ಸಿಗದಿರುವುದು ನಾಚಿಕೆಗೇಡು
Next articleಚಿಂಚನಸೂರ್ ರಾಜೀನಾಮೆ ಬಿಜೆಪಿಗೆ ನಷ್ಟವಿಲ್ಲ