ಬಹುಮಹಡಿ ಕಟ್ಟಡ ಕುಸಿತ: ಮೃತರ ಸಂಖ್ಯೆ 7ಕ್ಕೇರಿಕೆ

0
9

ಸೂರತ್ :   ಬಹುಮಹಡಿ ಕಟ್ಟಡವೊಂದು ಕುಸಿದ ಪರಿಣಾಮವಾಗಿ ದುರಂತದಲ್ಲಿ 7 ಮಂದಿ ಮೃತಪಟ್ಟು, ಹಲವು ಮಂದಿ ಅವಶೇಷಗಳಡಿ ಸಿಕ್ಕಿಹಾಕಿಕೊಂಡ ಘಟನೆ ಗುಜರಾತ್‍ನ ಸೂರತ್ ನಗರದ ಸಚಿನ್ ಪಾಲಿ ಗ್ರಾಮದಲ್ಲಿ ನಡೆದಿದೆ.

ಧಾರಾಕಾರ ಮಳೆಯಿಂದ ಕಟ್ಟಡ ಕುಸಿದದ್ದು ಆ  ಸಂದರ್ಭದಲ್ಲಿ ಐದು ಕುಟುಂಬಗಳು ಕಟ್ಟಡದ ಒಳಗೆ ಇದ್ದವು ಎನ್ನಲಾಗಿದೆ. ಅವಶೇಷಗಳಡಿಯಲ್ಲಿ ಸಿಕ್ಕಿಕೊಂಡಿದ್ದ ಒಬ್ಬ ಮಹಿಳೆಯನ್ನು ಜೀವಂತವಾಗಿ ಹೊರತೆಗೆಯಲಾಗಿದ್ದು,ಕೆಲವು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ . ಈ ಕಟ್ಟಡದಲ್ಲಿ 30 ಅಪಾರ್ಟ್‍ಮೆಂಟ್‍ಗಳಿದ್ದು, ಐದರಲ್ಲಿ ಮಾತ್ರ ಜನ ವಾಸವಿದ್ದರು ಎನ್ನಲಾಗಿದೆ.   ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ಧ್ವಂಸಗೊಂಡಿರುವ ಕಟ್ಟಡದ ಅವಶೇಷಗಳಡಿ ಸಿಕ್ಕಿಕೊಂಡಿರುವವರ ರಕ್ಷಣೆಗಾಗಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

Previous articleಅಂಚೆ ಚೀಟಿ ಬಿಡುಗಡೆಯಿಂದ ಸಿದ್ಧಾರೂಢರ ಜೀವನ ಚರಿತ್ರೆ ಅರಿಯಲು ಸಹಾಯಕ
Next articleವಿಜಯಪುರ: ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ