Home Advertisement
Home ಅಪರಾಧ ಬಸ್ ನಿಲ್ದಾಣದ ಶೌಚಾಲಯದಲ್ಲಿ ಶವ ಪತ್ತೆ

ಬಸ್ ನಿಲ್ದಾಣದ ಶೌಚಾಲಯದಲ್ಲಿ ಶವ ಪತ್ತೆ

0
102
ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ: ನಗರದ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ವಿಕಲಚೇತನರ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ವಿಕಲಚೇತನರ ಸಹಾಯಕ್ಕಾಗಿ ಹಾಕಿರುವ ಕಬ್ಬಿಣದ ಸಲಾಕೆಗೆ ನೇಣು ಹಾಕಲಾಗಿದೆ. ದುಷ್ಕರ್ಮಿಗಳು ಕೊಲೆ ಮಾಡಿ ನೇಣು ಹಾಕಿಕೊಂಡಂತೆ ಬಿಂಬಿಸಿರುವ ಅನುಮಾನ ವ್ಯಕ್ತವಾಗಿದೆ. ಕುಳಿತುಕೊಳ್ಳುವಷ್ಟು ಜಾಗದಲ್ಲಿ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.ಕಾಲು ದೇಹ ಸಂಪೂರ್ಣ ನೆಲದ ಮೇಲೆ‌ ಇರುವ ಕಾರಣ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತರ ಮಾಹಿತಿ ಕಲೆ ಹಾಕುತ್ತಿದ್ದಾರೆ.

Previous articleಬಿಜೆಪಿ ಎಂದರೆ ಬ್ರಿಟಿಷ್ ಜನತಾ ಪಕ್ಷ: ಮಧು ಬಂಗಾರಪ್ಪ
Next articleಬಾಲ್ಯದ ನೆನಪಿಗೆ ಶರಣೆಂದ ಶರಣ