ಬನ್ನಿ, ಯಾರೂ ರೌಡಿಗಳಿಲ್ಲ, ಎಲ್ಲರೂ ರೈತರೇ…

0
15

ಬಳ್ಳಾರಿ: ಇಲ್ಲಿ ಯಾರೂ ರೌಡಿಗಳಿಲ್ಲ, ಪುಡಾರಿಗಳೂ ಇಲ್ಲ ಎಲ್ಲರೂ ರೈತರೇ ಬನ್ನಿ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಕರೆದ ಘಟನೆ ನೆಡೆಯಿತು.
ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡ ವಕ್ಫ ಆಸ್ತಿ ನೋಂದಣಿ ವಿರೋಧಿ‌ ಪ್ರತಿಭಟನೆಯಲ್ಲಿ ಹೀಗೆ ನಡೆಯಿತು. ಎಲ್ಲ ಮುಖಂಡರ ಮಾತು ಮುಗಿದ ಬಳಿಕ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಆಗಮಿಸಿದಾಗ ಮಹಾತ್ಮ ಗಾಂಧಿ ಪ್ರತಿಮೆ ಇರುವ ಉದ್ಯಾನವನದ ಕಟ್ಟೆ ಮೇಲೆ ವಿಜಯೇಂದ್ರ ಸೇರಿ ಇತರೆ ಮುಖಂಡರು ಇದ್ದರು. ಮನವಿ ನೀಡಲು ಕೆಳಗೆ ಬನ್ನಿ ಎಂದು ಪೊಲೀಸರು ಬಿಜೆಪಿ ‌ನಾಯಕರಿಗೆ ಹೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು ಇಲ್ಲಿ‌‌ ಯಾರು ರೌಡಿಗಳು ಇಲ್ಲ. ಪುಡಾರಿಗಳು ಇಲ್ಲ. ಎಲ್ಲ ರೈತರೇ ಇರುವುದು ಬನ್ನಿ ಎಂದರು. ಈ ವೇಳೆ ನೆರೆದವರೆಲ್ಲ ಕೇಕೆ ಹಾಕಿದರು.

Previous articleಸಂಡೂರು‌ ಅಖಾಡಕ್ಕೆ ‌ನಾಳೆ‌‌ ಡಿಸಿಎಂ ಡಿ. ಕೆ.‌‌ ಶಿವಕುಮಾರ್
Next articleಅಂಧನಾಗಿದ್ದರು ಅಭೂತಪೂರ್ವ ಸಾಧನೆ…