ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪ ಅಂತ ಕಲ್ಯಾಣ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಸರ್ಪ ಯಾರ ಕೊರಳಲ್ಲಿ ಇರುತ್ತದೆ ಗೊತ್ತಾ? ಸರ್ಪ ನೀಲಕಂಠನ ಸಂಕೇತ. ಮೋದಿ ಅವರು ದೇಶದ ಭಯೋತ್ಪಾದನೆ, ಭ್ರಷ್ಟಾಚಾರ, ಬಡತನ ಒದ್ದೋಡಿಸಿ ಸಶಕ್ತ ಭಾರತ ಕಟ್ಟಲು ಹಲವಾರು ವಿಷ ನುಂಗಿ ನೀಲಕಂಠ ಆಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸೇಡಂ ಪಟ್ಟಣದ ಲ್ಲಿ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ ಪರ ರೋಡ್ ಶೋನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಟಿ ಶೃತಿ, ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ, ಸಂತೋಷಿರಾಣಿ ತೇಲ್ಕೂರ ಸಾಥ್ ನೀಡಿದರು.
























