ಪಿ.ಸಿ. ಗದ್ದಿಗೌಡರ ಮತದಾನ

0
25

ಬಾದಾಮಿ: ಟಿಎಪಿಸಿಎಂಎಸ್ ನಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆ ನಂ.162 ರಲ್ಲಿ ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅವರು ತಮ್ಮ (ಮತ) ಹಕ್ಕನ್ನು ಚಲಾಯಿಸಿದರು. ನಂತರ ಮಾತನಾಡಿದ ಗದ್ದಿಗೌಡರ ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಮೊತ್ತೊಮ್ಮೆ ಪ್ರಧಾನಿ ಮಾಡಬೇಕೆನ್ನುವ ಸಂಕಲ್ಪವನ್ನು ಜನರು ಮಾಡಿದ್ದಾರೆ. ಬಾಗಲಕೋಟ ಲೋಕಸಭಾ ಕ್ಷೇತ್ರದಲ್ಲಿಯೂ ಕೂಡಾ ನನ್ನನ್ನು ಗೆಲ್ಲಿಸುವ ನಿರ್ಣಯವನ್ನು ಕೈಗೊಂಡಿದ್ದಾರೆ ಹೀಗಾಗಿ ಮೊತ್ತೊಮ್ಮೆ ನನ್ನ ಗೆಲವು ಖಚಿತವಾಗಿದೆ ಎಂದು ಹೇಳಿದರು. ಈ ಬಾರಿ ಕ್ಷೇತ್ರದ ಜನತೆ ಕಳೆದ 4 ಬಾರಿಗಿಂತ ಹೆಚ್ಚಿನ ಮತಗಳನ್ನು ನೀಡಿ ಅಂದರೆ 2 ಲಕ್ಷಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇವರೊಂದಿಗೆ ಪುರಸಭೆ ಸದಸ್ಯ ಮಹಾಂತೆ ತಳವಾರ ಇದ್ದರು.

Previous articleಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮತದಾನ
Next articleಹಕ್ಕು ಚಲಾಯಿಸಲು ಬಂದ ವಿದ್ಯಾರ್ಥಿಗಳು: ಬಿಜೆಪಿ-ಕಾಂಗ್ರೆಸ್ ನಾಯಕರ ವಾಗ್ವಾದ