ಬೆಂಗಳೂರು: ಪರ್ಯಾಯ ಇಂಧನ ವಲಯವು ಹೇಗೆ ಭಾರತದ ಆರ್ಥಿಕ ಬೆಳವಣಿಗೆಗೆ ಶಕ್ತಿ ತುಂಬುತ್ತಿದೆ ಎಂಬುದರ ಕುರಿತು ಸಂಯುಕ್ತ ಕರ್ನಾಟಕದಲ್ಲಿ ನನ್ನ ಅಂಕಣವನ್ನು ಓದಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ರಾಷ್ಟ್ರೀಯ ಹಸಿರು ಹೈಡ್ರೊಜನ್ ಮಿಷನ್, ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ, ಪಿಎಂ ಕುಸುಮ್ ಯೋಜನೆ ಮತ್ತು ಕಡಲಾಚೆಯ ಪವನಶಕ್ತಿ ಯೋಜನೆಗಳು ಸೇರಿದಂತೆ ನವೀಕರಿಸಬಹುದಾದ ಇಂಧನವಲಯದಲ್ಲಿ ಭಾರತವು ಹಲವಾರು ಪ್ರಮುಖ ಯೋಜನೆಗಳನ್ನು ಮುನ್ನಡೆಸುತ್ತಿದೆ. ಭಾರತದ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ಕಳೆದ 10 ವರ್ಷಗಳಲ್ಲಿ ಅಸಾಧಾರಣವಾದ 165% ಹೆಚ್ಚಳವಾಗಿದೆ. ಪರ್ಯಾಯ ಇಂಧನ ವಲಯವು ಹೇಗೆ ಭಾರತದ ಆರ್ಥಿಕ ಬೆಳವಣಿಗೆಗೆ ಶಕ್ತಿ ತುಂಬುತ್ತಿದೆ ಎಂಬುದರ ಕುರಿತು ಸಂಯುಕ್ತ ಕರ್ನಾಟಕದಲ್ಲಿ ನನ್ನ ಅಂಕಣವನ್ನು ಓದಿ ಎಂದಿದ್ದಾರೆ.