ನಿರಾಣಿ ಒಡೆತನದ ಡಿಸ್ಟಿಲರಿ ಘಟಕದಲ್ಲಿ ಸ್ಫೋಟ: ಕಾರ್ಮಿಕ ಸಾವು

0
17

ಬಾಗಲಕೋಟೆ: ಮುಧೋಳದಲ್ಲಿರುವ ಸಚಿವ ಮುರುಗೇಶ ನಿರಾಣಿ ಒಡೆತನದ ಡಿಸ್ಟಿಲರಿ ಘಟಕದಲ್ಲಿ ಸ್ಫೋಟ ಉಂಟಾಗಿ ಕಾರ್ಮಿಕನೋರ್ವ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಗುರುನಾಥ ಹುಚ್ಚಣ್ಣವರ(೨೭) ಮೃತ ಕಾರ್ಮಿಕ. ಗಾಯಗೊಂಡ ಇತರ ನಾಲ್ವರನ್ನು ಚಿಕಿತ್ಸೆಗಾಗಿ ಮುಧೋಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವಕ್ಕೆ ತೊಂದರೆ ‌ಇಲ್ಲ ಎಂದು ತಿಳಿದು ಬಂದಿದೆ.

ಮೃತ ಗುರುನಾಥ ಮುಧೋಳ ನಗರದ ಜುಂಜರಕೊಪ್ಪಗಲ್ಲಿ ನಿವಾಸಿ ಎಂದು ತಿಳಿದು ಬಂದಿದೆ. ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleವೆಂಕಟೇಶ್‌ ಮನೆ ಮೇಲೆ ಲೋಕಾಯುಕ್ತ ದಾಳಿ
Next articleಇಸ್ರೋ ಮತ್ತೊಂದು ಮೈಲಿಗಲ್ಲು : 3 ಉಪಗ್ರಹಗಳ ರಾಕೆಟ್ ಯಶಸ್ವಿ ಉಡಾವಣೆ