ನಿಯಮಗಳ ಅನುಸಾರ ಹೊಸ ವರ್ಷಾಚರಣೆ ಮಾಡಿ

0
13

ಬೆಂಗಳೂರು: ನಿಯಮಗಳಿಗೆ ಅನುಸಾರ, ಎಚ್ಚರಿಕೆಯಿಂದ ಹೊಸವರ್ಷದ ಆಚರಣೆ ಮಾಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನದ ಹಿನ್ನೆಲೆ ಏಳು ದಿನಗಳ ಶೋಕಾಚರಣೆ ಘೋಷಣೆ ಮಾಡಿದ್ದೇವೆ. ಇದು ಕೇವಲ ಸರ್ಕಾರದ ಕಾರ್ಯಕ್ರಮಗಳಿಗೆ ಮಾತ್ರ ಅನ್ವಯ ಆಗುತ್ತದೆ. ಖಾಸಗಿ ಕಾರ್ಯಕ್ರಮಗಳನ್ನು ನಿಯಮಾನುಸಾರ ಮಾಡಿಕೊಳ್ಳಿ ಎಂದರು.
ಹೋಟೆಲ್, ರೆಸಾರ್ಟ್‌ಗಳಲ್ಲಿ ಹೊಸ ವರ್ಷದ ಆಚರಣೆ ಮಾಡಿ. ನಾವು ಬ್ಯುಸಿನೆಸ್ ಮಾಡುವವರಿಗೂ ಅಡ್ಡಿ ಪಡಿಸಲು ಆಗಲ್ಲ ಎಂದ ಅವರು, ಬೆಂಗಳೂರಿನಲ್ಲಿ ಹೆಚ್ಚುವರಿ ಭದ್ರತೆಗಾಗಿ 10,000 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ತಿಳಿಸಿದರು.

Previous articleದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ: 179 ಜನ ಸಾವು
Next articleಅವಾಚ್ಯ ಪದ ಬಳಕೆ ಪ್ರಕರಣ: ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ