ನಾಲ್ಕು ಮತಗಟ್ಟೆ ಚುನಾವಣಾ ಸಿಬ್ಬಂದಿಗೆ ಚಪಾತಿ ಊಟ

0
22

ಕಲಬುರಗಿ: ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜೇವರ್ಗಿ ಕ್ಷೇತ್ರ ದ ಮತಗಟ್ಟೆ ಸಂಖ್ಯೆ ೯೦ ರಲ್ಲಿ ಚುನಾವಣಾ ಸಿಬ್ಬಂದಿಗೆ ಮೂರು ಹೊತ್ತು ಬಿಸಿ ಬಿಸಿ ದ ಊಟ ವ್ಯವಸ್ಥೆ ಮಾಡಲಾಗಿತ್ತು.
ಮತಗಟ್ಟೆ ಸಂಖ್ಯೆಯ ೮೮, ೮೯, ೯೦ ಮತ್ತು ೯೧ ರ ಸಿಬ್ಬಂದಿಗೆ ಅಕ್ಷರ ದಾಸೋಹ ಸಿಬ್ಬಂದಿ ಯಿಂದ ಬೆಳಗ್ಗೆ ಉಪ್ಪಿಟ್ಟು, ಮಧ್ಯಾಹ್ನ ಹೆಣ್ಣೆ ಬದನೆಕಾಯಿ, ಚಪಾತಿ ಮತ್ತು ತಂಪಾದ ನೀರಿನ ವ್ಯವಸ್ಥೆ ಮಾಡಲಾಯಿತು. ಸಂಜೆ ಚಹಾ ಮತ್ತು ಚೂಡ ವ್ಯವಸ್ಥೆ ಮಾಡಲಾಗುತ್ತಿದೆ. ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ೩೪.೫೪ ಮತದಾನವಾಗಿತ್ತು. ವಿಶೇಷವಾಗಿ ಮತಗಟ್ಟೆ ೮೯ ರ ಸಖಿ ಮತಗಟ್ಟೆ ಕೇಂದ್ರದಲ್ಲಿ ಸೆಲ್ಫಿ ಸ್ಫಾಟ್, ಪೆಂಡಾಲ, ಅಚ್ಚು ಕಟ್ಟಾಗಿ ಮಾಡಲಾಗಿತ್ತು. ಇಲ್ಲಿಶೇ. ೨೮ ಮತದಾನ ವಾಗಿತ್ತು.

ಜೇವರ್ಗಿ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ 90ರಲ್ಲಿ ಶಿವರಾಜ ಮತ್ತು ಪವಿತ್ರಾ ದಂಪತಿ ತಮ್ಮ ಮಕ್ಕಳೊಂದಿಗೆ ಬಂದು ಮತ ಚಲಾಯಿಸಿದ ನಂತರ ಪಿಂಕ್ ಸೆಲ್ಪಿ ಬೂತ್ ನಲ್ಲಿ ಪೋಸ್ ನೀಡಿದರು

Previous articleಕೊಪ್ಪಳದಲ್ಲಿ ಮತದಾನ ಬಹಿಷ್ಕಾರ
Next articleಕಾರ್ಮಿಕ ಸಚಿವ ಸಂತೋಷ್ ಲಾಡ್ ಮತದಾನ