ಬೆಳಗಾವಿ: ಗಡಿನಾಡ ಬೆಳಗಾವಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಕಾಂಗ್ರೆಸ್ ಅಧಿವೇಶನದಲ್ಲಿ ವಿವಾದಾಸ್ಪದ ಬ್ಯಾನರ್ ಹಾಕಿದ್ದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಬೆಳಗಾವಿ ನಗರದ ಪ್ರವೇಶದ್ವಾರದ ಬಳಿ ಹಾಕಲಾಗಿರುವ ಸ್ವಾಗತ ಫ್ಲೆಕ್ಸ್‌ಗಳಲ್ಲಿ ಮುದ್ರಿಸಲಾದ ಭಾರತದ ನಕಾಶೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ಮತ್ತು ಅಕ್ಸಾಯ್ ಚೀನ್ ಪ್ರದೇಶಗಳು ಇಲ್ಲದೆ ಇರುವುದು ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ.
ಕಳೆದ ದಿನ ರಾತ್ರಿಯೇ ಬ್ಯಾನರ್‌ನಲ್ಲಾದ ಲೋಪ ಪತ್ತೆ ಮಾಡಿದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಅದನ್ನು ತಕ್ಷಣ ತೆರವು ಮಾಡುವಂತೆ ಎಚ್ಚರಿಕೆ ನೀಡಿದ್ದರು. ಗುರುವಾರ ಬೆಳಿಗ್ಗೆ ಈ ಲೋಪ ಒಪ್ಪಿಕೊಂಡ ಉಪ ಮುಖ್ಯಮಂತ್ರಿಗಳು ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಆ ಬ್ಯಾನರ್‌ನ್ನು ತೆಗೆದು ಹಾಕಿದ್ದಾಗಿ ಸ್ಪಷ್ಟಪಡಿಸಿದರು.