ಕಲಬುರಗಿ: ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಶ್ರೀ ಸಿಮೆಂಟ್ ಕಾರ್ಖಾನೆ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದ ರೈತನೋರ್ವ ತೀವ್ರ ಅಸ್ವಸ್ಥತರಾಗಿ ಮೃತಪಟ್ಟಿರುವ ದಾರುಣ ಘಟನೆ ಬೆಳಕಿಗೆ ಬಂದಿದ್ದು, ಫ್ಯಾಕ್ಟರಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಬೆನಕನಲ್ಳಿ ಗ್ರಾಮದ ನಿವಾಸಿ, ಧರಣಿ ಕುಳಿತಿದ್ದ ದೇವಿಂದ್ರಪ್ಪ ತಂದೆ ಮಲ್ಲಣ್ಣ ಜೋಗೆರ ( 50) ಮೃತಪಟ್ಟ ಕೂಲಿ ಕಾರ್ಮಿಕ ಎಂದು ಗುರುತಿಸಲಾಗಿದೆ. ಉದ್ಯೋಗ ಇಲ್ಲದೆ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಜಮೀನು ಸರ್ವೆ ನಂಬರ್ 358
2 ಎಕರೆ:20 ಗುಂಟೆ ಜಮೀನು ಶ್ರೀ ಸಿಮೆಂಟ್ ಕಂಪೆನಿ ಜಾಬ್ ಕಾರ್ಡ್ ಕೊಟ್ಟರು ಭೂಮಿ ನೂ ಕೂಡಾ ಭೂಮಿ ಕೊಟ್ಟಿದ್ದಾರೆ ಅವರು ಮಗನಿಗೆ ಉದ್ಯೋಗ ಕೊಟ್ಟಿಲ್ಲ ಎಂದು ಸಿಡಿದೆದ್ದು ಧರಣಿಗಿಳಿದಿದ್ದರು.
ಸೇಡಂ ತಾಲೂಕಿನ ಕೋಡ್ಲಾ ಬೆನಕನಹಳ್ಳಿ ಶ್ರೀ ಸಿಮೆಂಟ್ ಕಂಪೆನಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ದಿನಾಂಕ 1/12/2022 ರಂದು ಪ್ರಾರಂಭವಾದ ಧರಣಿ ಸತ್ಯಾಗ್ರಹವಾಗಿದ್ದು, 183 ನೇ ದಿನಕ್ಕೆ ಅಹೋರಾತ್ರಿ ಧರಣಿ ಕಾಲಿಟ್ಟಿದೆ.
ಶ್ರೀ ಸಿಮೆಂಟ್ ಕಂಪೆನಿ ಹೊರಬಿಡುವ ವಿಷಕಾರಿ ಗಾಳಿ ಸೇವನೆಯಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಧರಣಿ ಕುಳಿತು ಭೂಮಿ ಕಳೆದುಕೊಂಡ ರೈತರು ಬಿಗಿಪಟ್ಟು ಹಿಡಿದಿದ್ದಾರೆ. ಈ ಕುರಿತು ಸೇಡಂ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.


























