ಜೋಶಿ ಹೇಳಿಕೆಯಲ್ಲಿ ಒಂದು ಪರ್ಸೆಂಟ್ ಸತ್ಯಾಂಶವಿಲ್ಲ

0
27

ಮಂಗಳೂರು: ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರನ್ನು ಎನ್‌ಕೌಂಟರ್‌ ಮಾಡುವ ಷಡ್ಯಂತರ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಕ್ಕೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಲ್ಹಾದ್ ಜೋಶಿಯವರು ಸುಳ್ಳು ಹೇಳಿಕೆಯನ್ನು ನೀಡುತ್ತಿದ್ದಾರೆ. ಅವರ ಮನಸೋ ಇಚ್ಛೆ ಹೇಳಿಕೆಯನ್ನು ಒಪ್ಪುವ ಮಾತಿಲ್ಲ. ಯಾರನ್ನು ಕೇಳಿದರೂ ಈ ಹೇಳಿಕೆಯಲ್ಲಿ ಒಂದು ಪರ್ಸೆಂಟ್ ಸತ್ಯಾಂಶ ಇಲ್ಲ ಎಂದು ಹೇಳುತ್ತಾರೆ. ಜೋಶಿಯವರು ಕೇಂದ್ರ ಸಚಿವರಾಗಿ ಪ್ರಚೋದನಕಾರಿ ಹೇಳಿಕೆ ನೀಡುತ್ತಾರೆ ಎಂದರೆ ಅದು ಒಳ್ಳೆಯದಲ್ಲ ಎಂದರು.
ಸಿ.ಟಿ. ರವಿ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಂಬಲಿಗರು ಸ್ವಲ್ಪ ಕೋಪದಿಂದ ವರ್ತನೆ ಮಾಡಿದ್ದಾರೆ. ಸಿ.ಟಿ. ರವಿ ಮೇಲೆ ನೇರವಾಗಿ ಏನೂ ಹಲ್ಲೆಯಾಗಿಲ್ಲ. ಈ ಬಗ್ಗೆ ಪೊಲೀಸರು ಸಿಕ್ಕಿರುವ ಮಾಹಿತಿ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ. ಈ ದೂರಿಗೂ ಆ ದೂರಿಗೆ ಹೋಲಿಕೆ ಮಾಡುವುದು ಬೇಡ. ಸಿ.ಟಿ. ರವಿ ಆಕ್ಷೇಪಾರ್ಹ ಪದ ಹೇಳಿರುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರ ಇದೆ. ಅದರ ಬಗ್ಗೆ ಯಾರು ಕೂಡಾ ಕೇಳುತ್ತಿಲ್ಲ. ಬೇರೆ ವಿಚಾರದ ಬಗ್ಗೆಯೇ ಮಾತನಾಡುತ್ತಿದ್ದಾರೆ. ಸಿ.ಟಿ. ರವಿ ಹೇಳಿಕೆಗೆ ಬಗ್ಗೆ ತನಿಖೆಯಾಗುತ್ತಿದೆ. ಅವರ ವಿರುದ್ಧ ಏನು ಕ್ರಮ ಆಗಬೇಕೋ ಅದು ಆಗಿಯೇ ಆಗುತ್ತದೆ. ರವಿ ಅಕ್ಷೇಪಾರ್ಹ ಪದ ಬಳಕೆ ಮಾಡಿರುವುದು ಸತ್ಯವಾಗಿದ್ದರೆ ರವಿಯವರ ಬಗ್ಗೆ ಮಾತನಾಡುವವರು ಯಾವ ಆಧಾರದಲ್ಲಿ ಹೇಳುತ್ತಿದ್ದಾರೆ?
ಅವರು ಅದನ್ನು ಸಮರ್ಥನೆ ಮಾಡುತ್ತಾರಾ? ಬಿಜೆಪಿಯವರು ಇದನ್ನು ಸ್ಪಷ್ಟಪಡಿಸಲಿ. ರವಿಯವರ ಹೇಳಿಕೆ ಬಗ್ಗೆ ಯಾಕೆ ಸಂಘಪರಿವಾರ, ಬಿಜೆಪಿ ಮಾತನಾಡುತ್ತಿಲ್ಲ? ಹಾಗಾರೆ ರವಿ ಹೇಳಿಕೆ ಸತ್ಯ ಆಗಿದ್ದರೆ ಬಿಜೆಪಿಯವರ ಹೇಳಿಕೆ ಏನು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದರು.
ರಾಜ್ಯದಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆಯಲ್ಲಿ ನೂತನ ವ್ಯವಸ್ಥೆ ಜಾರಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸಚಿವ ದಿನೇಶ್‌ ಗುಂಡೂರಾವ್‌, ಸ್ಕ್ಯಾನಿಂಗ್ ವ್ಯವಸ್ಥೆಯಲ್ಲಾದ ಸಮಸ್ಯೆಯನ್ನು ಬಗೆಹರಿಸಿದ್ದೇನೆ. ತುರ್ತು ಸಂದರ್ಭದಲ್ಲಿ ಪ್ರಕ್ರಿಯೆಗಳನ್ನು ಮಾಡಬೇಕೆಂದಿಲ್ಲ. ಅನಾವಶ್ಯಕ, ಅನಗತ್ಯ ಸ್ಕ್ಯಾನಿಂಗ್ ತಡೆಯಲು ಈ ವ್ಯವಸ್ಥೆಯನ್ನು
ಜಾರಿ ಮಾಡುತ್ತಿದ್ದೇವೆ. ಅನಗತ್ಯ ಪ್ರಕ್ರಿಯೆಯನ್ನು ತಡೆ ಹಿಡಿಯಲು ಬದಲಾವಣೆ ಅವಶ್ಯಕವಾಗಿದೆ. ಒಂದೆರಡು ಸಮಸ್ಯೆಯಾಗಿದ್ದು ಹೌದು, ಅದನ್ನು ಈಗ ಬಗೆಹರಿಸಿದ್ದೇವೆ ಮಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ಎಂದರು.

Previous articleಬೀದರ: ರಾಷ್ಟ್ರಮಟ್ಟದ ಜಾನುವಾರು ತಳಿ ಸಂರಕ್ಷಣೆ ಪ್ರಶಸ್ತಿ
Next articleಕಬ್ಬು ತುಂಬಿದ್ದ ಲಾರಿ ಪಲ್ಟಿ: ಸಂಚಾರ ಅಸ್ತವ್ಯಸ್ತ