ಬಳ್ಳಾರಿ: ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸದವರ ಮೇಲೆ ನಿಗಾ ಇಡಲು ಕಾಂಗ್ರೆಸ್ ಕ್ಯಾಂಪಸ್ ಸ್ಕ್ವಾಡ್ ನೇಮಿಸಲಾಗಿದ್ದು, ಗುಪ್ತವಾಗಿ ಕಾರ್ಯಚರಣೆ ಮಾಡಿ ಕೆಪಿಸಿಸಿ ಕೇಂದ್ರ ಕಚೇರಿಗೆ ವರದಿ ನೀಡಲಾಗಿತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರಪ್ಪ ಹೇಳಿದರು.
ಸಂಡೂರಿನಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೂರು ಕ್ಷೇತ್ರದಲ್ಲಿಯೂ ಚುನಾವಣೆ ಉಸ್ತುವಾರಿಗಳಾಗಿ ಮಂತ್ರಿಗಳು, ಶಾಸಕರು, ಮಾಜಿ ಶಾಸಕರು, ಕಾಂಗ್ರೆಸ್ ಮುಖಂಡರಿಗೆ ವಿವಿಧ ಜವಾಬ್ದಾರಿ ನೀಡಿ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಕಗಿಕೊಳ್ಲುವ ಸೂಚನೆ ಇದೆ. ಆದರೆ ಕೆಲವರು ತಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸುತ್ತಿಲ್ಲ. ಸಚಿವರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಬಂದಾಗ ಮಾತ್ರ ಮುಖ ತೋರಿಸಿ ಹೋಗುವವರು ಇದ್ದಾರೆ. ಅಂತವರ ಹೆಸರು ಪಟ್ಟಿ ಮಾಡಿ ರಾಜ್ಯಾಧ್ಯಕ್ಷರಿಗೆ ನೀಡಲಾಗುತ್ತದೆ ಕೂಡಲೇ ಅವರನ್ನು ಜವಾಬ್ದಾರಿಯಿಂದ ವಜಾ ಮಾಡಲಾಗುತ್ತಿದೆ ಎಂದರು.