ಬೆಂಗಳೂರು: ಗ್ಯಾರಂಟಿ ಫೇಲ್ ಆಗಿದೆ, ಅಭಿವೃದ್ಧಿ ನಿಂತುಹೋಗಿದೆ ಎಂದು ಮಾಜಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಹಿಬಾಬ್ ನಿಷೇಧ ಆದೇಶ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಗ್ಯಾರಂಟಿ ಫೇಲ್ ಆಗಿದೆ, ಅಭಿವೃದ್ಧಿ ನಿಂತುಹೋಗಿದೆ, ಬರಗಾಲದಿಂದ ಕಂಗೆಟ್ಟಿರುವ ರೈತರ ಕಣ್ಣೀರೊರೆಸಲು ಕಲ್ಪಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಇವೆಲ್ಲ ಸಂಗತಿಗಳನ್ನು ಮುಚ್ಚಿಹಾಕಲು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಜಾಬ್ ಮೊರೆ ಹೋಗಿರುವುದು ವಿಪರ್ಯಾಸದ ಸಂಗತಿ. ಓಲೈಕೆಯ ನೆಪದಲ್ಲಿ ಶಾಲಾ-ಕಾಲೇಜುಗಳಲ್ಲಿದ್ದ ಸಮವಸ್ತ್ರ ಪದ್ದತಿಯ ಮಹತ್ವವನ್ನು ಕುಗ್ಗಿಸಿ, ಒಡೆದು ಆಳುವ ನೀತಿಯನ್ನು ಅನುಸರಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಖಂಡನೀಯ ಎಂದು ಬರೆದುಕೊಂಡಿದ್ದಾರೆ.