ಗೊಬ್ಬರ ಅಂಗಡಿಗೆ ಬೆಂಕಿ: ೨೦ ಲಕ್ಷ ರೂ.ಅಧಿಕ ಹಾನಿ

0
32

ಬಾಗಲಕೋಟೆ: ಗೊಬ್ಬರ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಘಟನೆ ನಗರದ ಎಂಜಿ ರಸ್ತೆಯಲ್ಲಿ ನಡೆದಿದೆ.
ವಿಠ್ಠಲ ಸಫಾರೆ ಮಾಲೀಕತ್ವದ ಕೃಷ್ಣಾ ಟ್ರೇಡಿಂಗ್ ಕಂಪನಿಯಲ್ಲಿ ಬುಧವಾರ ಸಂಜೆ ಈ ಘಟನೆ ಸಂಭವಿಸಿದ್ದು, ಅಗ್ನಿ ಶಾಮಕ ದಳದ ಎರಡು ವಾಹಗಳ ಮೂಲಕ ಬೆಂಕಿ ನಂದಿಸುವ ಕೆಲಸವಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಅಂಗಡಿಯ ಮಾಲೀಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಂಜೆ 5.45ರ ವೇಳೆಗೆ ಅಂಗಡಿಯಿಂದ ಹೊಗೆ ಬರಲು ಶುರುವಾಗಿದ್ದು ಕೂಡಲೇ ಗಮನಿಸಿ ಅಗ್ನಿ ಶಾಮಕದಳ ಸಿಬ್ಬಂದಿಗೆ ಮಾಹಿತಿ ಕೊಡಲಾಯಿತು. ೨೦ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಬೆಂಕಿ ಹತ್ತಲು ನಿಖರ ಕಾರಣವೇನೆಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಡಿಎಫ್‌ಒ ಮಲ್ಲಿಕಾರ್ಜುನಪ್ಪ, ಎಸ್‌ಎಸ್‌ಒ ಪರಶುರಾಮ ಲಮಾಣಿ ಹಾಗೂ ಎರಡು ವಾಹನಗಳ ೧೫ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Previous articleಹಳ್ಳಕ್ಕೆ ಬಿದ್ದ ಬೊಲೆರೊ ವಾಹನ: ಓರ್ವ ಸಾವು, 7 ಜನ ಗಂಭೀರ
Next articleದಿ ಕೇರಳ ಸ್ಟೋರಿ ಚಿತ್ರ ವೀಕ್ಷಣೆಗಾಗಿ ತರಗತಿಗೆ ರಜೆ: ಸಾಮಾಜಿಕ ಜಾಲತಾಣಗಳಲ್ಲಿ ವಿವಾದ