ಗೆಜೆಟೆಡ್ ಪ್ರೊಬೆಷನರಿ ಹುದ್ದೆ ಪರೀಕ್ಷೆಗೆ ೧೦ ಕೃಪಾಂಕಕ್ಕೆ ಅಸ್ತು

0
29

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಎರಡು ಬಾರಿ ನಡೆಸಿದ್ದ ಗೆಜೆಟೆಡ್ ಪ್ರೊಬೆಷನರಿ ೩೮೪ ಹುದ್ದೆಗಳ ಪ್ರಶ್ನೆ ಪತ್ರಿಕೆಯಲ್ಲಿನ ಲೋಪದೋಷಗಳ ಕುರಿತು ಪರಿಷ್ಕರಿಸಿ ಕೀ ಉತ್ತರ ಪ್ರಕಟಿಸಿದ್ದು, ಒಟ್ಟು ೫ ತಪ್ಪು ಪ್ರಶ್ನೆಗಳಿಗೆ ಕೃಪಾಂಕ ನೀಡಲು ಮುಂದಾಗಿದೆ.
ತಪ್ಪು ಪ್ರಶ್ನೆಗಳ ಕುರಿತು ರಾಜ್ಯಾದ್ಯಂತ ತೀವ್ರ ಆಕ್ಷೇಪ ಹಾಗೂ ಮರು ಪರೀಕ್ಷೆಗೆ ಒತ್ತಾಯ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರು ಗುರುವಾರ ಐದು ಪ್ರಶ್ನೆಗಳಿಗೆ ಒಟ್ಟು ೧೦ ಕೃಪಾಂಕ ನೀಡಲು ಮುಂದಾಗಿದ್ದಾರೆ. ಪ್ರಶ್ನೆ ಪತ್ರಿಕೆ ೧ ಮತ್ತು ೨ರಲ್ಲಿ ಆಗಿರುವ ತಪ್ಪಿಗೆ ೧೩ ಪ್ರಶ್ನೆಗಳನ್ನು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಿದ್ದಾರೆ.
ಕೆಪಿಎಸ್‌ಸಿ ಡಿಸೆಂಬರ್ ೨೯ರಂದು ಮತ್ತೆ ಪೂರ್ವಭಾವಿ ಮರು ಪರೀಕ್ಷೆ ನಡೆಸಿತ್ತು. ಆದರೆ, ಮತ್ತೆ ಯಡವಟ್ಟನಿಂದಾಗಿ ಹಲವು ತಪ್ಪು ಪ್ರಶ್ನೆಗಳನ್ನು ಕೇಳಿದ್ದು ಆಕ್ಷೇಪಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತ ಆಯೋಗ ಒಟ್ಟು ೫ ತಪ್ಪು ಉತ್ತರಗಳಿಗೆ ಕೃಪಾಂಕ ನೀಡಿದೆ.

Previous articleವಿಜಯೇಂದ್ರಗೆ ದುಡ್ಡಿನ ಮದ
Next articleಗರ್ಭದಲ್ಲಿರುವ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ !