ಕ್ರೌರ್ಯ ಸರಣೀ ರೂಪದಲ್ಲಿ ಎಗ್ಗಿಲ್ಲದೇ ಸಾಗಿದೆ

0
7

ಬೆಂಗಳೂರು: ಹೆಣ್ಣು ಮಕ್ಕಳ ಮೇಲೆ ನಿರಂತರ ಕ್ರೌರ್ಯ ಸರಣೀ ರೂಪದಲ್ಲಿ ಎಗ್ಗಿಲ್ಲದೇ ಸಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ‘ಹುಬ್ಬಳ್ಳಿಯಲ್ಲಿ ಅಪ್ರಾಪ್ತೆಯನ್ನು ಮುಸ್ಲಿಂ ಯುವಕ ಗರ್ಭಿಣಿಯನ್ನಾಗಿಸಿರುವ ಹೇಯ ಕೃತ್ಯ ವರದಿಯಾಗಿದೆ’. ‘ಕಾಂಗ್ರೆಸ್ ಸರ್ಕಾರ ಇದೆ ಎಂಬ ಧೈರ್ಯ, ಜಿಹಾದಿ ಮನಸ್ಥಿತಿಯ ಕ್ರಿಮಿನಲ್ ಗಳನ್ನು ಉತ್ತೇಜಿಸುತ್ತಿದೆ’ ಎಂಬ ಆತಂಕ ಶಾಂತಿಪ್ರಿಯ ಕರುನಾಡ ಜನತೆಯನ್ನು ಕಾಡುತ್ತಿದೆ.

ರಾಜ್ಯದಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲದಂತಾಗಿದೆ. ಕಣ್ಣೆದುರೇ ಮೂಲಭೂತವಾದಿ ಪುಂಡರು ಅಟ್ಟಹಾಸ ಮೆರೆಯುತ್ತಲೇ ಇದ್ದರೂ ಓಲೈಕೆ ರಾಜಕಾರಣಕ್ಕೆ ಜೋತುಬಿದ್ದಿರುವ ಕಾಂಗ್ರೆಸ್ ಸರ್ಕಾರ ಉದ್ದೇಶ ಪೂರ್ವಕ ನಿಷ್ಕ್ರೀಯತೆ ತೋರುತ್ತಿದೆ, ರಾಕ್ಷಸೀ ಪ್ರವೃತ್ತಿ ಮೆರೆಯುತ್ತಿರುವವರ ವಿರುದ್ಧ ಮೆದು ಧೋರಣೆ ಅನುಸರಿಸುತ್ತಿದೆ.

ಇದರಿಂದ ಹೆಣ್ಣು ಮಕ್ಕಳ ಮೇಲೆ ನಿರಂತರ ಕ್ರೌರ್ಯ ಸರಣೀ ರೂಪದಲ್ಲಿ ಎಗ್ಗಿಲ್ಲದೇ ಸಾಗಿದೆ. “ಹೆಣ್ಣು ಹೆತ್ತವರ ಆಕ್ರಂದನ ಅರಣ್ಯರೋಧನವಾಗಿದೆ, ಧೃತರಾಷ್ಟ್ರ ನಡವಳಿಕೆಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧರ್ಮಯುದ್ಧದಲ್ಲಿ(ಲೋಕಸಮರ) ಜನ ಪಾಠ ಕಲಿಸಬೇಕಿದೆ ಎಂದಿದ್ದಾರೆ.

Previous articleಅಭಿನಯಿಸುತ್ತಲೇ ವೇದಿಕೆ ಮೇಲೆ‌ ಕುಸಿದು ಕಲಾವಿದನ ಸಾವು
Next articleವಂಶಿಕಾ ಎಂದು ನಾಮಕರಣ ಮಾಡಿದ ಬೊಮ್ಮಾಯಿ