ದಾವಣಗೆರೆ: ಇಲ್ಲಿನ ವಿನೋಬನಗರದಲ್ಲಿ ಕ್ರೇನ್ ಚಾಲಕ ಮತ್ತು ಪೌರ ಕಾರ್ಮಿಕನ ನಡುವೆ ಜಟಾಪಟಿ ನಡೆದಿದ್ದು, ಕರ್ತವ್ಯದಲ್ಲಿದ್ದ ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ನಗರದ ವಿನೋಬನಗರದ ಮೊದಲೇ ಮುಖ್ಯ ರಸ್ತೆಯ ಶಿವಲಿಂಗೇಶ್ವರ ದೇವಸ್ಥಾನದ ಬಳಿ ಇಂದು ಬೆಳಿಗ್ಗೆ 8 ಗಂಟೆಯ ಸಮಯದಲ್ಲಿ ವಿನೋಬನಗರದ ಉರ್ದು ಶಾಲೆಯಿಂದ ಕಸ ತುಂಬಿಕೊಂಡು ಬರುತ್ತಿದ್ದ ಪೌರಕಾರ್ಮಿಕರು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಕ್ರೇನ್ ತೆಗೆಯಲು ಚಾಲಕನಿಗೆ ಹೇಳಿದ್ದಾರೆ, ಶಾಲೆಗೆ ಮಕ್ಕಳು ಹೋಗಲು ತೊಂದರೆ ಆಗುತ್ತಿದೆ ಆದುದರಿಂದ ಕ್ರೇನ್ ತೆಗೆಯಿರಿ ಎಂದು ಪೌರಕಾರ್ಮಿಕರು ಮನವಿ ಮಾಡಿದ್ದಾರೆ. ಆದರೆ, ಕ್ರೇನ್ ಚಾಲಕ ತೆಗೆಯಲು ನಿರಾಕರಿಸಿದ್ದಕ್ಕೆ ಮಾತಿನ ಚಕಮಕಿ ನಡೆದಿದ್ದು, ಮಹಾನಗರ ಪಾಲಿಕೆಯ ಪೌರ ಕಾರ್ಮಿಕನ ಮೇಲೆ ಕ್ರೇನ್ ಚಾಲಕ ಹಲ್ಲೆ ನಡೆಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ನರಹರಿ ಶೇಟ್ ಸಭಾ ಭವನದ ಬಳಿ ಕ್ರೇನ್ ಚಾಲಕ ಹಾಗೂ ಕಸ ತೆಗೆಯುವ ಪೌರಕಾರ್ಮಿಕರಿಬ್ಬರು ಶರ್ಟ್ ಕಾಲರ್ ಹಿಡಿದು ಮಾತಿಗೆ ಮಾತು ಬೆಳೆಸುತ್ತಿರುವ ವಿಡಿಯೋ ವೈರಲ್ ಆಗಿದೆ.