ಕೋಟೆನಗರಿಯಲ್ಲಿ ಗಮನಸೆಳೆದ ಯೋಗ ಪ್ರದರ್ಶನ

0
20

ಬಾಗಲಕೋಟೆ: ಬವಿವ ಸಂಘದ ಮೂರೂ ಕ್ಯಾಂಪಸಗಳಲ್ಲಿ ವಿಶ್ವ ಯೋಗ ದಿನದ ಅಂಗವಾಗಿ‌ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.

ಬಾಗಲಕೋಟೆಯ ಹಳೆ ಕ್ಯಾಂಪಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಭಾಗಿಯಾಗಿ ಯೋಗ ಮಾಡಿದರು.ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.

ನವನಗರದ ಮೆಡಿಕಲ್ ಕಾಲೇಜು ಕ್ಯಾಂಪಸ್ ನಲ್ಲಿ ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಬೇವೂರ, ವಿದ್ಯಾಗಿರಿಯ ಇಂಜನಿಯರಿಂಗ್ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ನೇತೃತ್ವ ವಹಿಸಿದ್ದರು.

ಕೇಂದ್ರದ ಆಯುಷ್ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಸಲಾಯಿತು.ವರುಣದೇವ ಕೃಪೆಗಾಗಿ ಪ್ರಾರ್ಥಿಸಿ ಯೋಗ ಕಾರ್ಯಕ್ರಮ ನಡೆಸಿದ್ದು ವಿಶೇಷವಾಗಿತ್ತು.

ಜಿಲ್ಲಾ ಕ್ರೀಡಾಂಗಣದಲ್ಲಿ ಸಂಸದ ಗದ್ದಿಗೌಡರ ಭಾಗಿ

ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಳಿತದಿಂದ ನಡೆದ ಸಮಾರಂಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ನೂತನ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಮತ್ತಿತರರು ಭಾಗವಹಿಸಿದ್ದರು.

Previous articleಉಚಿತ ವಿದ್ಯುತ್: 8 ಲಕ್ಷ ನೋಂದಣಿ
Next articleಕೆ.ಆರ್.ಎಸ್.ನಲ್ಲಿ ಬೃಹತ್ ಯೋಗ