ಕೊರೊನಾ: ಸಾರ್ವಜನಿಕರ ಸಹಕಾರವೂ ಅತಿ ಮುಖ್ಯ

0
13

ಬೆಂಗಳೂರು: ಕೊರೊನಾ ಮತ್ತೆ ಉಲ್ಬಣಿಸುತ್ತಿದೆ ಅದನ್ನು ತಡೆಯಲು ಸರ್ಕಾರವು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಿದೆ, ನಮ್ಮ ಪ್ರಯತ್ನ ಫಲನೀಡಬೇಕಾದರೆ ಸಾರ್ವಜನಿಕರ ಸಹಕಾರವೂ ಅತಿ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಜಗತ್ತಿನಾದ್ಯಂತ ಕೊರೊನಾ ಮತ್ತೆ ಉಲ್ಬಣಿಸುತ್ತಿದೆ. ರಾಜ್ಯದಲ್ಲಿ ಕೊವಿಡ್ -19 ವೈರಸ್ ಹರಡದಂತೆ ತಡೆಗಟ್ಟಲು ನಮ್ಮ ಸರ್ಕಾರವು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಿದೆ. ನಮ್ಮ ಪ್ರಯತ್ನ ಫಲನೀಡಬೇಕಾದರೆ ಸಾರ್ವಜನಿಕರ ಸಹಕಾರವೂ ಅತಿ ಮುಖ್ಯ. ಜನರ ಆರೋಗ್ಯದ ದೃಷ್ಟಿಯಿಂದ ನಾವು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದೇವೆ. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ನಾವು ನೀವು ಜೊತೆಗೂಡಿ ಕೊರೊನಾ ಸಾಂಕ್ರಾಮಿಕವನ್ನು ಹಿಮ್ಮೆಟ್ಟಿಸೋಣ ಎಂದಿದ್ದಾರೆ.

Previous articleಜಾತಿ ಜನಗಣತಿ ಜಾರಿ ಪರ ಬಿಜೆಪಿಯ ನಿಲುವು
Next articleಪ್ರಧಾನಿಗೆ ಐದು ಬೇಡಿಕೆಗಳ ಮನವಿ