ಕಾರ್ಮಿಕನ ಮೃತ ದೇಹ ನಡುರಸ್ತೆಯಲ್ಲಿ ಎಳೆದೊಯ್ದು ಅನಾಗರಿಕ ಮೆರೆದ ಸಿಬ್ಬಂದಿ

0
39

ಬದುಕಿದ್ದಾಗ ಕಾರ್ಮಿಕರಿಗೆ ಬೆಲೆ ಕೊಡದ ಕಂಪನಿ. ಕೊನೆಪಕ್ಷ ಸತ್ತ ಮೇಲಾದರೂ ಮೃತದೇಹಕ್ಕೆ ಗೌರವ ಕೊಡದಿರುವುದು ಕೆಂಗಣ್ಣಿಗೆ ಗುರಿಯಾಗಿದೆ

ಕಲಬುರಗಿ: ಕಲಬುರಗಿಯಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಘಟನೆ ನಡೆದಿದೆ.
ಮೃತದೇಹಕ್ಕೆ ಕನಿಷ್ಟ ಗೌರವವೂ ಕೊಡದೇ ಪ್ರಾಣಿ ತರ ವರ್ತನೆ ಮಾಡಿ ನಡುರಸ್ತೆಯಲ್ಲಿ ನಾಯಿ ತರ ಎಳೆದೊಯ್ದಿದ್ದಾರೆ. ಲೋ ಬಿಪಿ, ಹೃದಯಾಘಾತದಿಂದ ಕಾರ್ಮಿಕ ಸಾವನಪ್ಪಿದ್ದಾನೆ. ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ಬಳಿಯಿರುವ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕರ್ತವ್ಯನಿರತ ವೇಳೆ ಕಾರ್ಮಿಕ ಸಾವನ್ನಪ್ಪಿದ್ದಾನೆ. ಬಿಹಾರ ಮೂಲದ ಚಂದನಸಿಂಗ್ (35) ಮೃತ ದುದೈವಿ.
ಮೃತಪಟ್ಟ ಕಾರ್ಮಿಕನ ಮೃತದೇಹವನ್ನ ದರದರನೇ ನಾಯಿ ಹಾಗೇ ಸಿಬ್ಬಂದಿಗಳು ಎಳೆದುಕೊಂಡು ಹೋಗಿದ್ದಾರೆ. ಬದುಕಿದ್ದಾಗ ಕಾರ್ಮಿಕರಿಗೆ ಬೆಲೆ ಕೊಡದ ಶ್ರೀ ಸಿಮೆಂಟ್ ಕಂಪನಿ, ಕೊನೆಪಕ್ಷ ಸತ್ತ ಮೇಲಾದರೂ ಮೃತದೇಹಕ್ಕೆ ಗೌರವ ಕೊಡದಿರುವುದು ಕೆಂಗಣ್ಣಿಗೆ ಗುರಿಯಾಗಿದೆ.
ಶ್ರೀ ಸಿಮೆಂಟ್ ಕಂಪನಿ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸೇಡಂ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Previous articleಕಾಂಗ್ರೆಸ್ ಕೋಳಿ ಕೂಗಿದರೆ ಕರ್ನಾಟಕದಲ್ಲಿ ಬೆಳಕು…
Next articleಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ