Home Advertisement
Home ತಾಜಾ ಸುದ್ದಿ ಕಾಂಗ್ರೆಸ್ ಪಕ್ಷದಲ್ಲಿ ಗುಲಾಮಗಿರಿ: ಯತ್ನಾಳ‌

ಕಾಂಗ್ರೆಸ್ ಪಕ್ಷದಲ್ಲಿ ಗುಲಾಮಗಿರಿ: ಯತ್ನಾಳ‌

0
145

ಬಾಗಲಕೋಟೆ(ಇಳಕಲ್): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನಿಗೆ ಪ್ರಿಯಾಂಕ ಎಂಬ ಹೆಸರಿಡುವ ಮೂಲಕ ಗುಲಾಮಗಿರಿಯನ್ನು ಪ್ರದರ್ಶನ ಮಾಡಿದ್ದಾರೆ ಕಾಂಗ್ರೆಸ್ ಪಕ್ಷದಲ್ಲಿ ಗುಲಾಮಗಿರಿ ತುಂಬಿದೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.
ವೀರಮಣಿ ಕ್ರೀಡಾಂಗಣದಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶದ ಸಂವಿಧಾನವನ್ನು ರಚಿಸಿದ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ಕಾಂಗ್ರೇಸ್ಸೇತರ ಸರಕಾರ ನೀಡಿತು. ಆದರೆ, ಭಾರತರತ್ನ ಪ್ರಶಸ್ತಿಯನ್ನು ನೆಹರು, ಇಂದಿರಾ ಗಾಂಧಿ, ರಾಜೀವ ಗಾಂಧಿ ತಮ್ಮಷ್ಟಕ್ಕೇ ತಾವೇ ತೆಗೆದುಕೊಂಡರು ಹೊರತು ಅಂಬೇಡ್ಕರ್ ಅವರಿಗೆ ಕೊಡಲಿಲ್ಲ ಎಂದರು.
ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿರುವ ಕಾಂಗ್ರೆಸ್ ಅದಕ್ಕೆ ತಕ್ಕ ಪ್ರತಿಫಲವನ್ನು ಚುನಾವಣೆಯಲ್ಲಿ ಪಡೆಯಲಿದೆ ಲಿಂಗಾಯತರನ್ನು ತೆಗಳುವ ಸಿದ್ರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚು ಹೆಚ್ಚಾಗಿ ಗೆಲ್ಲಿಸಿ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುತ್ತಾ ಹೊರಟಿದ್ದಾರೆ ಅವರನ್ನು ಯಾರೂ ಮುಖ್ಯಮಂತ್ರಿ ಮಾಡುವುದಿಲ್ಲ ಏಕೆಂದರೆ ಚುನಾವಣೆಯಲ್ಲಿ ಬಿಜೆಪಿ 130 ಸ್ಥಾನ ಗೆದ್ದು ಅಧಿಕಾರಕ್ಕೆ ಬರುತ್ತದೆ. ಎಲ್ಲರೂ ಪ್ರಧಾನಿ ನರೇಂದ್ರ ಮೋದಿ ಹೇಳಿದ ಹಾಗೆ ಜೈ ಭಜರಂಗಿ ಎಂದು ಮತ ಚಲಾಯಿಸಿ ಎಂದು ಕರೆಕೊಟ್ಟರು.