ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ: ಸಿಎಂ

0
10
CM

ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 100% ಭ್ರಷ್ಟಾಚಾರ ನಡೆದಿದ್ದು, ಅಧಿಕಾರದಲ್ಲಿದ್ದಾಗ ಹಗರಣಗಳಲ್ಲೇ ಮುಳುಗಿದ್ದ ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆ ಮಾಡಿದ್ದ ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಮೂರು ತಿಂಗಳಿಗೆ ಒಮ್ಮೆ ಯಾವುದಾದರೂ ಪಕ್ಷ ರಾಜ್ಯ ಕಾರ್ಯಕಾರಿಣಿ ಮಾಡುತ್ತಿದ್ದರೆ ಅದು ಬಿಜೆಪಿ ಮಾತ್ರ. ಯಾಕೆಂದರೆ ನಮಗೆ ಕಾರ್ಯಸೂಚಿ ಇದೆ. ಅದರ ಅನುಗುಣವಾಗಿ ಕಾರ್ಯಕ್ರಮ ಇದೆ. ಅದರ ಕಾರ್ಯ ಸಾಧ್ಯವನ್ನು ಅವಲೋಕನ ಮಾಡಲು ಕಾರ್ಯಕಾರಿಣಿಯನ್ನು ಮಾಡುತ್ತೇವೆ ಎಂದರು.
ಇಡೀ ಭಾರತ ದೇಶದಲ್ಲಿ ಸದಾ ಚಲನಶೀಲ ಇರುವ, ಜನರಿಗೆ ಹತ್ತಿರ ಇರುವ, ಅವರ ಭಾವನೆಗಳಿಗೆ ಸ್ಪಂದಿಸುವ ಜನಕ್ಕಾಗಿ ರಾಜಕಾರಣ ಮಾಡುತ್ತಿರುವ ಒಂದು ಪಕ್ಷ ಎಂದರೆ ಅದು ಭಾರತೀಯ ಜನತಾ ಪಕ್ಷ. ನಾವು ನಮ್ಮ ಕಾರ್ಯಕ್ರಮಗಳನ್ನು ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಅವಲೋಕನ ಮಾಡಲು ಇದು ಒಂದು ಉತ್ತಮ ವೇದಿಕೆ ಎಂದರು.

Previous articleʻಮಹಾʼ ಚೀಟಿ ಎಡವಟ್ಟು: ಟಿಕೆಟ್‌ ರೋಲ್ ನೀಡಿದ್ದ ಸಂಸ್ಥೆಗೆ ನೋಟಿಸ್
Next articleಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ತೀರ್ಮಾನ: ಸಿಎಂ