Home Advertisement
Home ನಮ್ಮ ಜಿಲ್ಲೆ ಕಲಬುರಗಿ ಕಲಬುರಗಿ ಬಂದ್: ಬೆಳಗ್ಗೆಯಿಂದಲೇ ಶುರುವಾಯಿತು ಪ್ರತಿಭಟನೆ ಬಿಸಿ

ಕಲಬುರಗಿ ಬಂದ್: ಬೆಳಗ್ಗೆಯಿಂದಲೇ ಶುರುವಾಯಿತು ಪ್ರತಿಭಟನೆ ಬಿಸಿ

0
108

ಕಲಬುರಗಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಸಂವಿಧಾನ ರಕ್ಷಣಾ ಸಮಿತಿ, ದಲಿತ್ಪರ ಹಾಗೂ ವಿವಿಧ ಸಂಘಟನೆಗಳು ಇಂದು (ಮಂಗಳವಾರ) ಕಲಬುರಗಿ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ನಗರದ ಹಲವೆಡೆ ಬೆಳಗ್ಗೆ ಪ್ರಾರಂಭವಾಗುವ ಅಂಗಡಿ ಮುಗ್ಗಟ್ಟುಗಳು ಮುಚ್ಚಿರುವುದನ್ನು ಕಂಡು ಬಂದಿದೆ, ದಿನನಿತ್ಯ ಓಡಾಟ ಹೆಚ್ಚೇರುತ್ತಿದ್ದು ಇಂದು ಸಾರ್ವಜನಿಕರ ತಿರುಗಾಟ ಕಡಿಮೆ ಪ್ರಮಾಣದಲ್ಲಿ ಕಾಣಿಸಿದೆ. ಕಲಬುರಗಿ ಬಂದ್ ಹಿನ್ನೆಲೆ ಕೆಲವು ಪ್ರಯಾಣಿಕರು ಕೇಂದ್ರದ ಬಸ್ ನಿಲ್ದಾಣದ ಬಳಿ ಬಂದು ಬಸ್ಸಿಗಾಗಿ ಕಾದಿರುವ ಘಟನೆಯು ಜರುಗಿದೆ.

ಬೆಳಕು ಬೀರುವ ಮುನ್ನವೇ ಪ್ರತಿಭಟನೆ: ನಗರದಲ್ಲಿ ಬೆಳಗ್ಗೆ ಸೂರ್ಯನ ಬೆಳಕು ತಾಗುವ ಮುನ್ನವೇ ಕೆಲವು ಕಡೆ ಪ್ರತಿಭಟನೆ ನಡೆಯದಿರುವುದು ವರದಿಯಾಗಿದೆ, ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಅಂಬೇಡ್ಕರ್ ಅವರ ಕುರಿತಾಗಿ ಅವಹೇಳಿನಕಾರಿಯಾಗಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ ಅವರ ಪ್ರತಿಕ್ರಿತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಹೀಗೆ ಬೆಳಗ್ಗೆಯೇ ಪ್ರತಿಭಟನೆ ಕಾವು ಪ್ರಾರಂಭವಾಗಿದೆ.