ಕರ್ನಾಟಕ ಬಸ್‌ಗಳ ಮೇಲೆ ಪುಂಡಾಟಿಕೆ

0
17

ಬಾಗಲಕೋಟೆ: ಜಿಲ್ಲೆಯ ಇಳಕಲ್ ಡಿಪೋದಿಂದ ಮಹಾರಾಷ್ಟ್ರಕ್ಕೆ ತೆರಳಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳಿಗೆ ಕಿಡಿಗೇಡಿಗಳು ಕೇಸರಿ ಬಣ್ಣ ಬಳಿದು ಜೈ ಮಹಾರಾಷ್ಟ್ರ ಎಂದು ಬರೆದಿರುವ ಘಟನೆ ನಡೆದಿದೆ.
ಇಳಕಲ್ ಡಿಪೋದಿಂದ ಸೋಲಾಪುರಕ್ಕೆ ತೆರಳಿದ್ದ ಬಸ್‌ಗಳನ್ನು ತಡೆದಿರುವ ಶಿವಸೇನೆ ಕಾರ್ಯಕರ್ತರು ಎರಡೂ ಬಸ್‌ಗಳ ಚಾಲಕರನ್ನು ಕೆಳಗಿಳಿಸಿ ತಲೆಗೆ ಹಾಗೂ ಮುಖಕ್ಕೆ ಕೇಸರಿ ಬಣ್ಣ ಬಳಿದು “ಜೈ ಮಹಾರಾಷ್ಟ್ರ” ಎಂದು ಬರೆದಿದ್ದಾರೆ.
ಕರ್ನಾಟಕದ ಜನ ಜೈ ಮಹಾರಾಷ್ಟ್ರ ಎನ್ನಬೇಕೆಂದು ಪುಂಡಾಟ ಮೆರೆದಿರುವ ಕಾರ್ಯಕರ್ತರು ಬಸ್ ನಿರ್ವಾಹಕರು “ಜೈ ಮಹಾರಾಷ್ಟ್ರ, ಜೈ ಕರ್ನಾಟಕ” ಎಂದು ಘೋಷಣೆ ಕೂಗಿದ ಮೇಲೆ ಬಸ್ ತೆರಳಲು ಅನುವು‌ ಮಾಡಿಕೊಟ್ಟಿದ್ದಾರೆ. ಘಟನೆ ನಂತರ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್‌ಗಳ ಸಂಚಾರ ತೆರವುಗೊಳಿಸಲಾಗಿದ್ದು, ಮಹಾರಾಷ್ಟ್ರ ಗಡಿಯವರೆಗೆ ಮಾತ್ರವೇ ಬಸ್‌ಗಳನ್ನು ಬಿಡಲಾಗುತ್ತಿದೆ.

Previous articleವಿಧಾನಸಭೆ ಸ್ಪೀಕ‌ರ್ ಆಗಿ ವಿಜೇಂದ‌ರ್ ಗುಪ್ತಾ ಆಯ್ಕೆ
Next articleಪೊಲೀಸ್ ವಸತಿಗೃಹಕ್ಕೇ ಕನ್ನ!