ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಆರ್ಸಿಬಿ ಕರ್ನಾಟಕ ಆಟಗಾರರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಅಭಿಮಾನಿಗಳು ಕೋಪಗೊಂಡಿದ್ದಾರೆ.
ಅಭಿಮಾನಿಗಳು ಮೈದಾನದಲ್ಲಿ ರಾಬಿನ್ ಉತ್ತಪ್ಪ ಅವರಿಗೆ ಆರ್ಸಿಬಿ ಸೇರಿಕೊಳ್ಳಿ ಎಂದಿದ್ದಕ್ಕೆ, ಇಲ್ಲಿನ ಆಟಗಾರರನ್ನು ತೆಗೆದುಕೊಳ್ಳಲ್ಲ ಎಂದು ಬೇಸರದಿಂದಲೇ ಹೇಳಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕರ್ನಾಟಕ ತಂಡಕ್ಕಾಗಿ ಆಡುವ ಅತ್ಯುತ್ತಮ ಆಟಗಾರರು ಇದ್ದರೂ ಆರ್ಸಿಬಿ ಅವರನ್ನು ನಿರ್ಲಕ್ಷಿಸುತ್ತಿದೆ ಎಂದು ಹೇಳಿದ್ದಾರೆ. ಐಪಿಎಲ್ 2024ರ ಮಿನಿ ಹರಾಜಿನಲ್ಲಿ ಮನೀಷ್ ಪಾಂಡೆ ಮೂಲಬೆಲೆ 50 ಲಕ್ಷ ಹೊಂದಿದ್ದರೂ ಆರ್ಸಿಬಿ ಖರೀದಿ ಮಾಡಲಿಲ್ಲ. ಕೆಕೆಆರ್ ಖರೀದಿಸಿತ್ತು. ಸ್ಪಿನ್ನರ್ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಕೂಡ ಮೂಲಬೆಲೆ 20 ಲಕ್ಷ ರೂಪಾಯಿಗೆ ಮುಂಬೈ ಇಂಡಿಯನ್ಸ್ ಖರೀದಿಸಿತ್ತು.