ಅಮಿತ್ ಶಾ ಭೇಟಿಯಾದ ನಿಖಿಲ್‌

0
29

ನವದೆಹಲಿ: ಬಿಜೆಪಿ ವರಿಷ್ಠ ನಾಯಕ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಸಂಸತ್ ಭವನದಲ್ಲಿ ಭೇಟಿ ಮಾಡಿದ್ದಾರೆ.
ಇನ್ನು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡು ಪೋಸ್ಟ್‌ ಮಾಡಿದ್ದು ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಕರ್ನಾಟಕದಲ್ಲಿ #NDA ಮೈತ್ರಿಕೂಟವನ್ನು ಮತ್ತಷ್ಟು ಬಲವರ್ಧನೆ ಮಾಡುವ ದೃಷ್ಟಿಯಿಂದ ಮಾನ್ಯರು ಕೆಲ ಮಹತ್ವದ ಸಲಹೆ ಸೂಚನೆಗಳನ್ನು ನೀಡಿ ಮಾರ್ಗದರ್ಶನ ನೀಡಿದರು. ಅವರ ಪ್ರೀತಿ, ವಿಶ್ವಾಸ, ವಾತ್ಸಲ್ಯಕ್ಕೆ ನಾನು ಕೃತಜ್ಞನಾಗಿದ್ದೇನೆ. ಅಮಿತ್ ಶಾ ಅವರ ಸಂಘಟನಾ ಚತುರತೆ, ನಾಯಕತ್ವ ಗುಣಗಳು ನನ್ನನ್ನು ಒಳಗೊಂಡಂತೆ ಅಸಂಖ್ಯಾತ ಯುವಜನರಿಗೆ ಪ್ರೇರಣಾದಾಯಕ ಎಂದಿದ್ದಾರೆ.

Previous articleಮೀಸಲಾತಿ ಹೋರಾಟಕ್ಕೆ ಸಂಪೂರ್ಣ ಬೆಂಬಲ
Next articleಕಾರುಗಳ ಓವರ್ ಟೇಕ್ ಭರಾಟೆಗೆ ಮಹಿಳೆ ಬಲಿ