ಅನುಭವ ಸಿನಿಮಾದ ಖ್ಯಾತನಟಿ ಅಭಿನಯಗೆ ಜೈಲುಶಿಕ್ಷೆ

0
23
ಅನುಭವ

ಬೆಂಗಳೂರು: ಖ್ಯಾತ ನಟಿ, ಕಿರುತೆರೆಯ ಹಿರಿಯ ಕಲಾವಿದೆ ಅಭಿನಯ ಸೇರಿದಂತೆ ಮೂವರಿಗೆ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ಏಕಸದಸ್ಯಪೀಠ ಆದೇಶ ನೀಡಿದೆ.
ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಅಭಿನಯ ಹಾಗೂ ಅವರ ತಾಯಿ ಜಯಮ್ಮ ಹಾಗೂ ಸಹೋದರ ಶ್ರೀನಿವಾಸ್ ಸೇರಿ ಮೂವರಿಗೆ ಜೈಲುಶಿಕ್ಷೆ ವಿಧಿಸಲಾಗಿದೆ. ನಟಿ ಅಭಿನಯ ಅವರ ಅಣ್ಣನ ಪತ್ನಿ ಲಕ್ಷ್ಮಿ ದೇವಿ ಚಂದ್ರಾಲೇಔಟ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದರು. ವಿವಾಹದ ವೇಳೆ 80 ಸಾವಿರ ವರದಕ್ಷಿಣೆ ಪಡೆದಿದ್ದರು. ಬಳಿಕ ವಿವಾಹದ ನಂತರ 1 ಲಕ್ಷ ವರದಕ್ಷಿಣೆ ಮಗು ಹುಟ್ಟಿದ ಬಳಿಕವೂ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಲಕ್ಷ್ಮಿ ದೇವಿ ಪತಿ, ಅತ್ತೆ ಹಾಗೂ ನಾದಿನಿ ವಿರುದ್ಧ ದೂರು ದಾಖಲಿಸಿದ್ದರು.
ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು, ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಅಭಿನಯಾ ಅವರಿಗೆ 2 ವರ್ಷ ಜೈಲುಶಿಕ್ಷೆ, ಅವರ ತಾಯಿ ಜಯಮ್ಮಾ ಅವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ಸಹೋದರ ಶ್ರೀನಿವಾಸ್ ಗೆ 2 ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

Previous articleಸಿದ್ದರಾಮಯ್ಯ ಪರಿಶಿಷ್ಟ ಸಮುದಾಯಗಳತ್ತ ತಿರುಗಿಯೂ ನೋಡಿಲ್ಲ:ಸಿಎಂ ಬೊಮ್ಮಾಯಿ
Next articleಗಡಿ ವಿವಾದ ಮಹಾರಾಷ್ಟ್ರದವರು ರಾಜಕೀಯ ಲಾಭಕ್ಕೆ ಬಳಕೆ – ಮಾಜಿ ಸಿಎಂ ಶೆಟ್ಟರ್ ಆರೋಪ