ಅಧಿಕೃತ ಅನುಮತಿ ಇರುವ ದಾಖಲೆ ಒದಗಿಸಲು ಸೂಚನೆ

0
30

ಉಳ್ಳಾಲ: ಉಚ್ಚಿಲದ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿರುವ ವಾಝ್ಕೋ ಬೀಚ್ ರೆಸಾರ್ಟ್‌ಗೆ ಬೀಗ ಜಡಿದಿದ್ದು, ಪರವಾನಿಗೆ ರದ್ದುಪಡಿಸಲಾಗಿದೆ. ಮುಂದಿನ ಆದೇಶ ದವರೆಗೆ ತೆರೆಯುವಂತಿಲ್ಲ. ಇರುವ ಇತರ ರೆಸಾರ್ಟ್‌ಗಳು ಪ್ರವಾಸೋದ್ಯಮ ಇಲಾಖೆ ಅನುಮತಿ ಇರುವ ದಾಖಲೆ ಒದಗಿಸುವಂತೆ ಪುರಸಭೆ ಸೂಚನೆ ನೀಡಿದೆ.
ಮುಂಜಾಗ್ರತಾ ಕ್ರಮವಾಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ರೆಸಾರ್ಟ್‌ಗಳಿಗೆ ಇಂದು ಪುರಸಭೆ ನೋಟಿಸ್ ನೀಡಲಿದ್ದು, ಪ್ರವಾಸೋದ್ಯಮ ಇಲಾಖೆ ಅನುಮತಿ ಇಲ್ಲದ ರೆಸಾರ್ಟ್ ಬಂದ್ ಮಾಡಬೇಕು. ಅನಧಿಕೃತವಾಗಿ ಇರುವ ರೆಸಾರ್ಟ್‌ಗಳು ಅಧಿಕೃತ ಮಾಡಬೇಕು. ಅಧಿಕೃತ ಅನುಮತಿ ಇರುವವರು ದಾಖಲೆ ಒದಗಿಸಬೇಕು. ಇಂದು ನೋಟಿಸ್ ನೀಡಿದ ಬಳಿಕ ವಾರಕ್ಕೊಮ್ಮೆ ರೆಸಾರ್ಟ್ ಪರಿಶೀಲನೆ ನಡೆಸಲು ರೆವೆನ್ಯೂ ಇನ್ಸ್‌ಪೆಕ್ಟರ್‌ಗೆ ಸೂಚನೆ ನೀಡಲಾಗಿದೆ ಎಂದು ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತಡಿ ತಿಳಿಸಿದ್ದಾರೆ.

Previous articleಯುವತಿಯರ ಮೃತದೇಹ ತಡರಾತ್ರಿ ಹಸ್ತಾಂತರ: ರೆಸಾರ್ಟ್‌ ಮಾಲೀಕ, ಮ್ಯಾನೇಜರ್ ಬಂಧನ
Next articleಕನಕದಾಸರು ವಿಶ್ವಮಾನವರಾಗಿದ್ದರು