IT-BT ಕಂಪನಿ ಮುಖ್ಯಸ್ಥರ ಜೊತೆ ಸಚಿವ ಡಾ.ಅಶ್ವಥ್ ನಾರಾಯಣ್​ ಸಭೆ..!

0
33

ಬೆಂಗಳೂರು: ಬೆಂಗಳೂರು IT-BT ಕಂಪನಿಗಳಿಗೆ ಸರ್ಕಾರದ ಅಭಯ ನೀಡಿದ್ದು, ಕಂಪನಿ ಮುಖ್ಯಸ್ಥರ ಮನವೊಲಿಕೆ ಮೀಟಿಂಗ್​​ ನಡೆಸಲಾಗಿದೆ.

IT-BT ಕಂಪನಿಗಳ ಜೊತೆ ಸಚಿವ ಡಾ.ಅಶ್ವಥ್ ನಾರಾಯಣ್​ ಸಭೆ ನಡೆಸಿದ್ದು, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ ಸಚಿವರು,ಉತ್ತಮವಾದ ಬೆಂಗಳೂರು ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇವೆ. ಇದೇ ತಿಂಗಳಲ್ಲಿ ಹೊಸ ಯೋಜನೆ ತರಲು ಸಿಎಂ ಸೂಚಿಸಿದ್ದಾರೆ, ಪ್ರವಾಹ ಸಮಸ್ಯೆ ಮಾತ್ರವಲ್ಲ ಸಮಸ್ತ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಮಹದೇವಪುರದಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುತ್ತೇವೆ, ಮುಂದಿನ ಮಳೆಗಾಲ ಸಮಯಕ್ಕೆ ಈ ಸಮಸ್ಯೆ ಇರಲ್ಲ, ಒತ್ತುವರಿ ಮಾಡಿ ಬಿಲ್ಡಿಂಗ್ ಕಟ್ಟಿರೋರ ಮೇಲೆ ಕ್ರಮ ಆಗುತ್ತೆ ಅಶ್ವಥ್ ನಾರಾಯಣ್​​ ಭರವಸೆ ಕೊಟ್ಟಿದ್ದಾರೆ.

Previous articleಶನಿವಾರವೇ ಜನೋತ್ಸವ ಕಾರ್ಯಕ್ರಮ : ಸಚಿವ ಡಾ.ಕೆ.ಸುಧಾಕರ್​..
Next articleಜನೋತ್ಸವ ಹೆಸರು ಬದಲಾವಣೆ