ಹತಾಶೆ ಭಾವನೆಯಲ್ಲಿ ಆರೋಪ: ಸವದಿ ಪ್ರತಿಕ್ರಿಯೆ

0
20
ಸಿದ್ದು ಸವದಿ

ಬಾಗಲಕೋಟೆ(ರಬಕವಿ-ಬನಹಟ್ಟಿ): ಬೊಗಳೋ ನಾಯಿ ಕಚ್ಚಲ್ಲ, ಕಾಂಗ್ರೆಸ್ ಕುತಂತ್ರ ರಾಜಕಾರಣದಿಂದ ನನ್ನ ಮೇಲೆ ಯಾವುದೇ ಆರೋಪಗಳನ್ನು ಮಾಡುವ ನೈತಿಕತೆಯಿಲ್ಲದೆ ಹತಾಶೆ ಭಾವನೆಯಲ್ಲಿ ಲೋಕಾಯುಕ್ತ ದೂರು ಸಲ್ಲಿಸಿರುವ ಆರೋಪವನ್ನು ಖಡಾಖಂಡಿತ ತಳ್ಳಿ ಹಾಕುತ್ತೇನೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಶಾಸಕ ಸವದಿ ವಿರುದ್ಧ ಅಕ್ರಮ ಆಸ್ತಿ ಆರೋಪದ ಹಿನ್ನಲೆಯಲ್ಲಿ ಲೋಕಾಯುಕ್ತಕ್ಕೆ ಕಾಂಗ್ರೆಸ್ ಮುಖಂಡ ರಾಜು ನಂದೆಪ್ಪನವರ(ದೇಸಾಯಿ) ದೂರು ನೀಡಿದ್ದಕ್ಕೆ ಸಂಯುಕ್ತ ಕರ್ನಾಟಕಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಮಯ ಬಂದಾಗ ಉತ್ತರ ನೀಡುವೆ. ಆರೋಪ ಮಾಡಿರುವ ವ್ಯಕ್ತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವ ಯೋಚನೆ ನನ್ನದಾಗಿದೆ ಎಂದು ಸವದಿ ಸ್ಪಷ್ಟಪಡಿಸಿದರು.

Previous articleಜಿಡಿಎಸ್‌ಗೆ ಅಧಿಕಾರ ನೀಡಿದರೆ ಪಂಚರತ್ನ ಯೋಜನೆ ಜಾರಿ
Next articleಕುಮಾರಣ್ಣ ಸಿಎಂ ಆಗದಿದ್ದರೆ ನಿವೃತ್ತಿ: ಇಬ್ರಾಹಿಂ