ಹಾನಗಲ್ಲ ತಾಲೂಕಿನ ಮಹಾರಾಜಪೇಟೆಯಲ್ಲಿ ಸಿಡಿಲು ಬಡಿದು ಕುರಿಗಾಹಿ ನಾಗರಾಜ ಲಕ್ಕಪ್ಪ ಮುತ್ನಾಳ(೨೨) ಮೃತಪಟ್ಟಿದ್ದಾನೆ.
ಹೊಲದಲ್ಲಿ ಕುರಿ ಮೇಯಿಸಲು ತೆರಳಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಲವಾದ ಮಳೆ-ಗಾಳಿ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಜರುಗಿದ್ದು. ಮರಣೋತ್ತರ ಪರೀಕ್ಷೆಗಾಗಿ ಹಾನಗಲ್ಲಿನ ಸರ್ಕಾರಿ ಆಸ್ಪತ್ರೆಗೆ ಯುವಕನ ಶವ ರವಾನೆ ಮಾಡಲಾಗಿದೆ.