ಸಾವಿರಾರು ಕೋಟಿ ರೂಪಾಯಿ ಅಸ್ತಿಯನ್ನೆ ದೇಶಕ್ಕಾಗಿ ಬಿಟ್ಟು ಕೊಟ್ಟ ಕಾಂಗ್ರೆಸ್ ನ ನೆಹರು

0
22

ಸಾವಿರಾರು ಕೋಟಿ ರೂಪಾಯಿ ಅಸ್ತಿಯನ್ನೆ ದೇಶಕ್ಕಾಗಿ ಬಿಟ್ಟು ಕೊಟ್ಟ ಕಾಂಗ್ರೆಸ್ ನ ನೆಹರು ಕುಟುಂಬ ಒಂದು ಸಣ್ಣ ಮೊತ್ತದ ಹಣಕ್ಕೆ ವಂಚನೆ ಮಾಡಿದೆ ಎಂದು ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಹರು ಕುಟುಂಬ ಸದಾ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡ್ಕೊಂಡು ಬಂದ ಕುತ್ವ ಅಂತಹ ಕುಟುಂಬದ ಮೇಲೆ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡುತ್ತಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬ ಹಣ ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪ ಮಾಡುವ ಬಿಜೆಪಿ ನಾಯಕರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದರು ಅಲ್ಲದೆ ನೆಹರು ಕುಟುಂಬಕ್ಕೆ ಅಂತಹ ಸಣ್ಣ ಹಣಕ್ಕೆ ವಂಚನೆ ಮಾಡುವ ಅಗತ್ಯ ಏನು ಎಂದು ಪ್ರಶ್ನಿಸಿದರು.
ನನ್ನ ಮೇಲೆ ಪದೇ ಪದೇ ಬಿಜೆಪಿ ರಾಜ್ಯ ನಾಯಕರು ಭ್ರಷ್ಟಾಚಾರದ ಆರೋಪ ಹೊರಿಸುವ ಕೆಲಸ ಮಾಡುತ್ತಿದ್ದಾರೆ. ಆದ್ರೆ, ಹಾಲಿ ಅವರದ್ದೇ ಸರ್ಕಾರ ಇದೆ. ಆದರೆ ಯಾಕೆ ಏನೂ ಮಾಡಲಾಗುತ್ತಿಲ್ಲ ಎಂದು ಅವರು ಖಾರವಾಗಿ ಪ್ರಶ್ನಿಸಿದ ಅವೆ ಈ ಹಿಂದೆ ಇದ್ದ ನಮ್ಮ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂತಲೂ ಆರೋಪಿಸುತ್ತಾರೆ. ಹಾಗಿದ್ದರೆ ಕಳೆದ ಮೂರು ವರ್ಷದಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಇದರ ತನಿಖೆ ಮಾಡಲು ಯಾಕೆ ಸಿದ್ದವಿಲ್ಲ ಎಂದು ಅವರು ಪ್ರಶ್ನಿಸಿದರು.
ಹಾಲಿ ರಾಹುಲ್ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ದೇಶದಲ್ಲಿ ಶಾಂತಿ ಸೌಹಾರ್ದತೆ ನೆಲೆಸಬೇಕು ಎಂಬ ಕಾರಣಕ್ಕೆ ಹಮ್ಮಿಕೊಳ್ಳಲಾಗಿದೆ. ದೇಶದ ನಿರುದ್ಯೋಗ, ಬಡತನ ಮುಂತಾದ ಸಮಸ್ಯೆ ನಿವಾರಿಸಲು ದೇಶದ ಜನರ ಜೊತೆ ರಾಹುಲ್ ಗಾಂಧಿ ಚರ್ಚೆ ಮಾಡಲಿದ್ದಾರೆ ಎಂದು ಅವರು ಹೇಳಿದರು.

Previous articleಸೈಮಾ 2022 : ಗೆದ್ದವರ ಸಂಪೂರ್ಣ ಪಟ್ಟಿ
Next articleಮಾವುತನನ್ನು ಬೆನ್ನಟ್ಟಿದ ಸಾಕಾನೆ