ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮರುನಾಮಕರಣ

0
10
ಶಿಕ್ಷಣ ಇಲಾಖೆ

ʼಸಾರ್ವಜನಿಕ ಶಿಕ್ಷಣ ಇಲಾಖೆʼಗೆ ʼಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆʼ ಎಂದು ರಾಜ್ಯ ಸರಕಾರ ಮರುನಾಮಕರಣ ಮಾಡಿ ಆದೇಶ ಹೊರಡಿಸಿದೆ.
ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಅಧೀನದಲ್ಲಿ ಬರುವ ಎಲ್ಲ ಕ್ಷೇತ್ರ ಕಚೇರಿಗಳು ಹಾಗೂ ರಾಜ್ಯದ ಎಲ್ಲ ಜಿಲ್ಲಾ ಕ್ಲಸ್ಟರ್‌ ಶಾಲೆಗಳು ಮತ್ತು ಕಚೇರಿಗಳ ನಾಮಫಲಕಗಳನ್ನು ʼಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆʼ ಎಂದು ಬದಲಾಯಿಸಲು ತಕ್ಷಣದಿಂದ ಜಾರಿಗೆ ಬರುವಂತೆ ಸರಕಾರ ಆದೇಶಿಸಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಹುದ್ದೆಯನ್ನು ಸಹ ಆಯುಕ್ತರು, ʼಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆʼ ಎಂದು ಬದಲಾಯಿಸಿದೆ.

Previous articleವಿಜಯಪುರ: 4.64 ಲಕ್ಷ ಮನೆಗಳಿಗೆ ಕುಡಿವ ನೀರು ಒದಗಿಸುವ ಗುರಿ
Next articleನಮ್ಮ ಕೆಲಸಗಳೇ ಗ್ಯಾರಂಟಿ