ಸರಣಿಗಳ್ಳತನ: ನಗದು, ಒಡವೆ ದೋಚಿ ಪರಾರಿ

0
17

ಬಾಗಲಕೋಟೆ: ರಬಕವಿ-ಬನಹಟ್ಟಿ ನಗರದ ವಿದ್ಯಾನಗರ ಬಡಾವಣೆಯ ವಿವಿಧೆಡೆ ಸರಣಿಗಳ್ಳತನ ನಡೆಸಿರುವ ಕಳ್ಳರು ನಗದು, ಬಂಗಾರ ಒಡವೆ ದೋಚಿ ಪರಾರಿಯಾದ ಘಟನೆ ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯ ರಬಕವಿಯಲ್ಲಿ ನಡೆದಿದೆ.
ರಬಕವಿಯ ವಿದ್ಯಾನಗರದ 8ನೇ ಕ್ರಾಸ್‌ನಲ್ಲಿನ ಚನ್ನಪ್ಪ ಮುಂಡಗನೂರ ಹಾಗು ಚಿದಾನಂದ ಉಪ್ಪಾರ ಎಂಬುವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಒಟ್ಟು 50 ಸಾವಿರ ನಗದು ಹಾಗು 7.5 ಗ್ರಾಂ ಬಂಗಾರ ಕಳ್ಳತನವಾಗಿರುವದು ದಾಖಲೆಯಾಗಿದೆ.
ಈ ಪ್ರಕರಣವು ದಿ.13 ಗುರುವಾರದಂದು ರಾತ್ರಿ 10 ರ ನಂತರ ಶನಿವಾರ ಬೆಳಗಿನ ಜಾವ 7 ಗಂಟೆ ನಡುವಿನ ಸಮಯದಲ್ಲಿ ನಡೆದಿರುವದು ತಡವಾಗಿ ಬೆಳಕಿಗೆ ಬಂದಿದೆ.
ಏಳೆಂಟು ಮನೆಗಳಿಗೆ ಕಣ್ಣ
ಇಬ್ಬರು ಯುವಕರಿಂದ ನಡೆದ ಸರಣಿಗಳ್ಳತನವು ಸುಮಾರು ಏಳೆಂಟು ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿರುವದರ ಬಗ್ಗೆ ಸ್ಥಳೀಯರಿಂದ ತಿಳಿದು ಬಂದಿದೆ.
ಕೀಲಿ ಹಾಕಿದ ಮನೆಗಳೇ ಟಾರ್ಗೆಟ್
ವಿದ್ಯಾನಗರ ಬಡಾವಣೆಯಲ್ಲಿ ಮಧ್ಯಮ ವರ್ಗ ಹಾಗು ಶ್ರೀಮಂತರೇ ಹೆಚ್ಚು ವಾಸಿಸುವ ಪ್ರದೇಶವಾಗಿದ್ದು, ಹೆಚ್ಚಿನ ಕುಟುಂಬಗಳು ರಬಕವಿಯ ಊರಿನೊಳಗೂ ಮನೆಗಳಿವೆ. ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ಮನೆಗಳು ಕೀಲಿ ಹಾಕಿದ್ದೇ ಇರುತ್ತವೆ. ಇದೆಲ್ಲವನ್ನೂ ಹಗಲು ಹೊತ್ತು ಗಮನಿಸಿದ ಕಳ್ಳರು ರಾತ್ರಿ ಹೊತ್ತು ತಮ್ಮ ಕೈಚಳಕ ತೋರಿಸಿದ್ದಾರೆ. ಇನ್ನೂ ಕೆಲ ಮನೆ ಮಾಲಿಕರು ಊರಲಿಲ್ಲ. ಹೀಗಾಗಿ ಎಷ್ಟು ಕಳ್ಳತನವಾಗಿದೆ ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ.

Previous articleಗಡ್ಕರಿಗೆ ಬೆದರಿಕೆ ಹಾಕಿದವನಿಗೆ ಉಗ್ರರ ನಂಟು..!
Next articleವರ್ಗಾವಣೆಯಲ್ಲಿ ಭ್ರಷ್ಟಾಚಾರ ಜಾರಿಕೊಳ್ಳುತ್ತಿರುವ ಸಿಎಂ: ಬೊಮ್ಮಾಯಿ ಆರೋಪ