ಸಂಸದ ತೇಜಸ್ವಿ ಸೂರ್ಯಾಗೆ ಮಸಾಲೆ ದೋಸೆ ಡಂಜೊ ಮಾಡಿದ ಕಾಂಗ್ರೆಸ್‌

0
24

ಬೆಂಗಳೂರು : ಬೆಂಗಳೂರು ಮಳೆಯಿಂದ ಸಂಕಷ್ಟದ ಪರಿಸ್ಥಿತಿಯಲ್ಲಿ ನರಳುತ್ತಿರುವಾಗ ಹೋಟೆಲ್‌ವೊಂದರಲ್ಲಿ ಮಸಾಲೆ ದೋಸೆ ತಿಂದು ತನಗೆ ಟೆಮ್ಟ್‌ ಆಗಿದೆ ಎಂದು ಹೇಳಿಕೊಂಡಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಅವರ ನಿರ್ಲಕ್ಷ್ಯತನ ಖಂಡಿಸಿ ಪ್ರತಿಭಟನಾರ್ಥವಾಗಿ 10 ಮಸಾಲೆ ದೋಸೆಗಳನ್ನು ಪಾರ್ಸೆಲ್‌ ಕಳುಹಿಸಿದ್ದಾರೆ. ಬೆಂಗಳೂರಿನ ಕೆಲವು ಭಾಗಗಳು ಭೀಕರ ಪ್ರವಾಹವನ್ನು ಎದುರಿಸುತ್ತಿರುವಾಗ ದೋಸೆ ಸವಿಯುತ್ತಾ ಅಡ್ಡಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಅವರ ನಿರ್ಲಕ್ಷ್ಯತನವನ್ನು ಖಂಡಿಸಿರುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಜನಪ್ರಿಯ ರೆಸ್ಟೋರೆಂಟ್‌ಗಳಿಂದ ಹತ್ತು ವಿವಿಧ ದೋಸೆಗಳನ್ನು ತೇಜಸ್ವಿ ಸೂರ್ಯ ಅವರಿಗೆ ಕಳುಹಿಸಿ ಅವರು ಕೇವಲ ರೆಸ್ಟೋರೆಂಟ್‌ಗಳ ಜನಪ್ರಿಯತೆಯ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ ಹೊರತು ಜನರ ಬಗ್ಗೆ ಅಲ್ಲ ಎಂದು ಆರೋಪಿಸಿದರು.

Previous articleಬಳ್ಳಾರಿಯಲ್ಲಿ ಡಿಕೆಶಿಗೆ ಸೇಬಿನ ಹಾರ, ಸೇಬಿಗಾಗಿ ಮುಗಿಬಿದ್ದ ಜನರು
Next articleಸೈಮಾ 2022: ಅತಿ ಹೆಚ್ಚು ಕೆಟಗರಿಯಲ್ಲಿ ನಾಮಿನೇಟ್ ಆದ ಕನ್ನಡದ ಸಿನಿಮಾ ಯಾವುದು?