ವಿಶೇಷ ರೈಲುಗಳ ಅವಧಿ ವಿಸ್ತರಣೆ

0
22

ಹುಬ್ಬಳ್ಳಿ: ಕೆಲ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ಕೆಲ ದಿನಗಳ ಕಾಲ ವಿಸ್ತರಣೆ ಮಾಡಲು ನೈರುತ್ಯ ರೈಲ್ವೆ ವಲಯ ನಿರ್ಧರಿಸಿದೆ. ಅವುಗಳ ಮಾಹಿತಿ ಇಲ್ಲಿದೆ ನೋಡಿ…
೧. ರೈಲು ಸಂಖ್ಯೆ ೦೭೩೫೫ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ರಾಮೇಶ್ವರಂ ನಿಲ್ದಾಣಗಳ ನಡುವೆ ಪ್ರತಿ ಶನಿವಾರ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜುಲೈ ೧ ರಿಂದ ಸೆಪ್ಟೆಂಬರ್ ೩೦ ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜೂನ್ ೨೪ ರವರೆಗೆ ಓಡಿಸಲು ಸೂಚಿಸಲಾಗಿತ್ತು.

೨. ರೈಲು ಸಂಖ್ಯೆ ೦೭೩೫೬ ರಾಮೇಶ್ವರಂ ಮತ್ತು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಪ್ರತಿ ಭಾನುವಾರ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜುಲೈ ೨ ರಿಂದ ಅಕ್ಟೋಬರ್ ೧ ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜೂನ್ ೨೫ ರವರೆಗೆ ಓಡಿಸಲು ಸೂಚಿಸಲಾಗಿತ್ತು.

೩. ರೈಲು ಸಂಖ್ಯೆ ೦೭೩೭೭ ವಿಜಯಪುರ ಮತ್ತು ಮಂಗಳೂರು ಜಂಕ್ಷನ್‌ ನಿಲ್ದಾಣಗಳ ನಡುವೆ ದಿನಾಲೂ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜುಲೈ ೧ ರಿಂದ ಅಗಸ್ಟ್ ೩೧ ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜೂನ್ ೩೦ ರವರೆಗೆ ಓಡಿಸಲು ಸೂಚಿಸಲಾಗಿತ್ತು.

೪. ರೈಲು ಸಂಖ್ಯೆ ೦೭೩೭೮ – ಮಂಗಳೂರು ಜಂಕ್ಷನ್‌ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ದಿನಾಲೂ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜುಲೈ ೨ ರಿಂದ ಸೆಪ್ಟೆಂಬರ್ ೧ ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜುಲೈ ೧ ರವರೆಗೆ ಓಡಿಸಲು ಸೂಚಿಸಲಾಗಿತ್ತು.

Previous articleಯೋಜನೆ ತಡೆಯುವ ಉದ್ದೇಶದಿಂದ ಕೇಂದ್ರ ಅಕ್ಕಿ ನೀಡುತ್ತಿಲ್ಲ
Next articleಶ್ರೀಗಂಧದ ಮರ ಕಡಿದು ಮಾರಾಟ ಮಾಡುತ್ತಿದ್ದ ನಾಲ್ವರು ಕಳ್ಳರು ಪೊಲೀಸ್ ವಶಕ್ಕೆ