ವಿಮಾನದ ರೆಕ್ಕೆಗೆ ಹಕ್ಕಿ ಡಿಕ್ಕಿ ತಪ್ಪಿದ ದುರಂತ

0
8
ವಿಮಾನ
ಸಾಂದರ್ಭಿಕ ಚಿತ್ರ

ಮಂಗಳೂರು: ಇಲ್ಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ಇಂಡಿಗೊ ವಿಮಾನದ ರೆಕ್ಕೆಗೆ ಟೇಕಾಫ್‌ ವೇಳೆ ಹಕ್ಕಿ ಡಿಕ್ಕಿ ಹೊಡೆದಿದ್ದು, ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ.
ಬೆಳಿಗ್ಗೆ 8.30ಕ್ಕೆ ವಿಮಾನವು ಟ್ಯಾಕ್ಸಿ ವೇ ದಾಟಿ ರನ್‌ವೇನಲ್ಲಿ ಸಾಗುತ್ತಿತ್ತು. ಈ ಸಂದರ್ಭದಲ್ಲಿ ವಿಮಾನದ ರೆಕ್ಕೆಗೆ ಹಕ್ಕಿ ಡಿಕ್ಕಿ ಹೊಡೆಯಿತು. ವಿಮಾನದ ಪೈಲಟ್‌ ಏರ್‌ ಟ್ರಾಫಿಕ್‌ ಕಂಟ್ರೋಲ್‌ (ಎಟಿಸಿ)ಗೆ ಮಾಹಿತಿ ನೀಡಿದರು. ರನ್‌ವೇಯಿಂದ ವಿಮಾನ ಹಾರದೆ, ವಾಪಸ್‌ ಬಂತು. ಪ್ರಯಾಣಿಕರನ್ನು ಇಳಿಸಿ, ತಪಾಸಣೆ ಮಾಡಲಾಯಿತು. ಬೆಳಿಗ್ಗೆ 11.05ಕ್ಕೆ ವಿಮಾನ ದುಬೈಗೆ ಪ್ರಯಾಣ ಬೆಳೆಸಿತು’ ಎಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

Previous articleಆಧುನಿಕ ಮನೋವಿಜ್ಞಾನಿಗಳ ಪ್ರಕಾರ ಮನಸ್ಸು
Next articleನೈತಿಕ ಪೊಲೀಸ್‌ಗಿರಿಗೆ ಕಾದಿದೆ ಮಾರಿಹಬ್ಬ