ಬೆಂಗಳೂರು: ಲೋಕ ಕಲ್ಯಾಣಕ್ಕಾಗಿ ಯಾಗಗಳು ನಿರಂತರ ನಡೆಯಲಿ. ಚಾತುರ್ಮಾಸ್ಯ ಸಂದರ್ಭದಲ್ಲಿ ಲೋಕಕಲ್ಯಾಣಕ್ಕಾಗಿ ನಡೆಯುವ ಚಂಡಿಕಾ ಯಾಗದಿಂದ ಎಲ್ಲರಿಗೂ ಒಳಿತಾಗಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ನಡೆಯುತ್ತಿರುವ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಚ್ಮೀ ನರಸಿಂಹ ಪೀಠಾಧೀಶ್ವರರಾದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ ಹಾಗೂ ಚಂಡಿಕಾ ಯಾಗದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನೂರು ದಿನಗಳಿಗಿಂತಲೂ ಹೆಚ್ಚು ನಡೆತುವ ಈ ಚಾತುರ್ಮಾಸ್ಯಕ್ಕೆ ಗೋಪಾಲಯ್ಯ ಕುಟುಂಬ ಸೇವಾಕಾರ್ಯ ಮಾಡುತ್ತಿದೆ. ಅವರಿಗೆ ಶ್ರೇಯಸ್ಸು ದೊರಕಲಿ, ಈ ಚಂಡಿಕಾ ಯಾಗದಿಂದ ಎಲ್ಲರಿಗೂ ಒಳಿತಾಗಲಿ. ಕಾಲಕಾಲಕ್ಕೆ ಋಷಿ ಮುನಿಗಳು ನಾಡಿನ ಶ್ರೇಯೋಭಿವೃದ್ದಿಗಾಗಿ ಯಾವ ಮಾಡುತ್ತ ಬಂದಿರುವುದು ನಮ್ಮ ಸಂಸ್ಕೃತಿಯಲ್ಲಿ ನಡೆಯುತ್ತಿದೆ.
ಯಾವಾಗ ಅಗತ್ಯ ಇದೆ ಆಗ ಋಷಿ ಮುನಿಗಳು ಯಾಗ ಮಾಡುತ್ತ ಬಂದಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಇಂತ ಯಾಗಗಳು ನಿರಂತರ ನಡೆಯಲಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ. ಗೋಪಾಲಯ್ಯ, ಶಾಸಕ ಸಿ.ಕೆ. ರಾಮಮೂರ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮೀ ನಾರಾಯಣ ಮತ್ತಿತರರಿದ್ದರು.