ರಾಯಚೂರು: ರಾಯಚೂರಿಗೆ ಟೆಕ್ಸ್‌ಟೈಲ್ ಪಾರ್ಕ್ ಪ್ರಸ್ತಾವನೆ ಸಲ್ಲಿಸಲು ನಿರ್ದಾರ ಮಾಡಲಾಗಿದೆ ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ಅವರು ರಾಯಚೂರು
ಜಿಲ್ಲೆಗೆ ಸಂಬಂಧಿಸಿದ ಕೈಗಾರಿಕಾ ವಲಯದ ಅಭಿವೃದ್ಧಿ, ಪ್ರಸಕ್ತ ಸ್ಥಿತಿಗತಿ ಹಾಗೂ ಅಲ್ಲಿನ ಸಮಸ್ಯೆಗಳ ಕುರಿತು ವಿವರವಾಗಿ ಚರ್ಚಿಸಲು ಜಿಲ್ಲೆಯ ಜನಪ್ರತಿನಿಧಿಗಳ, ಕೈಗಾರಿಕೋದ್ಯಮಿಗಳ ಹಾಗೂ ಅಧಿಕಾರಿಗಳ ಜೋತೆ ಸಚಿವ ಎಂ. ಬಿ. ಪಾಟೀಲ ಸಭೆ ನಡೆಸಿದರು. ಈ ಕುರಿತು ಟ್ವೀಟ್ ಮಾಡಿರುವ ಅವರು”ಜಿಲ್ಲೆಯ ಶಾಸಕರುಗಳು, ಉದ್ಯಮಿಗಳು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದು ಸಭೆಯಲ್ಲಿ ಕೈಗೊಂಡ ಮುಖ್ಯ ನಿರ್ಧಾರಗಳನ್ನು ಹಂಚಿಕೊಂಡಿದ್ದಾರೆ.
✅ ಕೈಗಾರಿಕಾ ಪ್ರದೇಶಗಳಲ್ಲಿ ಒಂದು ಬಾರಿ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಕ್ರಮ, ನಂತರದ ನಿರ್ವಹಣೆಯನ್ನು ಆಯಾ ಕೈಗಾರಿಕಾ ಪ್ರದೇಶಗಳ ಕೈಗಾರಿಕಾ ಸಂಘಗಳಿಗೆ ನೀಡುವುದು.
✅ ರಾಯಚೂರಿಗೆ ಟೆಕ್ಸ್‌ಟೈಲ್ ಪಾರ್ಕ್ ಪ್ರಸ್ತಾಪನೆ ಸಲ್ಲಿಸಲು ನಿರ್ಧಾರ
✅ ಜಿಲ್ಲೆಯ ರೈಸ್ ಮಿಲ್‌ಗಳಿಗೆ ಮೀಸಲಾದ ನೀರು ಸರಬರಾಜು
✅ ಔಷಧ ಕಂಪನಿಗಳ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ
ಜಿಲ್ಲೆಯಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಶೀಘ್ರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ” ಎಂದಿದ್ದಾರೆ