ರಾಜಕಾರಣದಿಂದ ಅನರ್ಹ ಮಾಡುವ ಕೆಲಸ ಮಾಡಲಿ

0
32

ಬಳ್ಳಾರಿ: ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ಸಿಕ್ಕ 100 ಕೋಟಿ ರೂಪಾಯಿಗೂ ನಮಗೂ ಯಾವುದೇ ಸಂಬಂಧ ಇಲ್ಲ, ಬಿಜೆಪಿಗರ ವರ್ತನೆ ಗಮನಿಸಿದರೆ ಇದು ಅವರದ್ದೇ ಆದಂತೆ ಕಾಣುತ್ತದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕುಟುಕಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಯಾವುದೇ ರಾಜ್ಯ ಸರ್ಕಾರ ಇಂತಹ ಹಗರಣವನ್ನು ಸಿಬಿಐಗೆ ವಹಿಸಿದ ಉದಾಹರಣೆ ಇಲ್ಲ. ನಮ್ಮ ಸರ್ಕಾರ ಮಾಡಿದೆ. ಹೀಗೆ ಇರುವಾಗ ಅದು ಕಾಂಗ್ರೆಸ್ ನಾಯಕರ ಹಣ ಎಂದು ಹೇಳುವುದು ಸರಿ ಅಲ್ಲ ಎಂದರು.
ನಮ್ಮ ಸರ್ಕಾರ ನಗಮೋಹನ್ ದಾಸ್ ಅವರ ನೇತೃತ್ವದಲ್ಲಿ 40% ಕಮೀಷನ್ ವಿಷಯವನ್ನು ನಾವು ತನಿಖೆಗೆ ಒಳ ಪಡಿಸಿದ್ದೇವೆ. ಬಿಜೆಪಿ ಸಹ ಇಂಥ ಧೈರ್ಯ ತೋರಲಿ. ಕಾನೂನು ತಿದ್ದುಪಡಿ ಮಾಡಲಿ. ದೇಶದ ಎಲ್ಲ ಪಕ್ಷದ ರಾಜಕಾರಣಿಗಳ ಆದಾಯ ಮೂಲ ಮತ್ತು ಆಸ್ತಿ ವಿಚಾರ ತಾಳೆ ಮಾಡಿ ಕ್ರಮ ವಹಿಸಲಿ. ತಪ್ಪಿತಸ್ಥರು ಯಾರದ್ದೇ ಪಕ್ಷದವರು ಆಗಿದ್ದರೂ ಅವರನ್ನು ಚುನಾವಣೆ ರಾಜಕಾರಣದಿಂದ ಅನರ್ಹ ಮಾಡುವ ಕೆಲಸ ಮಾಡಲಿ ಎಂದು ಅವರು ತಿಳಿಸಿದರು.

Previous articleಅಕ್ರಮ ಮದ್ಯಕ್ಕೆ ಟ್ರಾನ್ಸ್‌ಫಾರ್ಮರ್‌ ಮಾದರಿ
Next articleಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ