ಬಾಗಲಕೋಟೆ: ಮಾನಸಿಕವಾಗಿ ದುರ್ಬಲವಾಗಿರುವ ಪ್ರಧಾನಿ ನರೇಂದ್ರ ಮೋದಿಯೊಬ್ಬ ಸ್ವಯಂ ಘೋಷಿತ ವಿಶ್ವಗುರು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವ್ಯಂಗ್ಯವಾಡಿದ್ದಾರೆ.
ಸೋಮವಾರ ವಿದ್ಯಾಗಿರಿಯ ಹೊಸ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ವಿದೇಶಕ್ಕೆ ತೆರಳಿರುವ ಮೋದಿ ಕೈ ಬೀಸಿದರು, ಕೈ ಮಾಡಿದರು, ಬಗ್ಗಿದ್ದರು ಅದನ್ನು ಬಿಟ್ಟು ಯಾವುದಾದರೂ ಒಪ್ಪಂದ ಮಾಡಿಕೊಂಡರಾ ಅಮೇರಿಕದಿಂದ ಭಾರತಕ್ಕೆ ಏನಾದರೂ ತಂದಿದ್ದಾರ. ಚೀನಾ ಆಕ್ರಮಣ ತಡೆಯೋಕೆ ಏನಾದರೂ ಯೋಜನೆ ರೂಪಿಸಿದರಾ ಎಂದು ಪ್ರಶ್ನೆ ಮಾಡಿದರು. ಎಂದಾದರೂ ಮೋದಿ ಮಾಧ್ಯಮಗಳಿಗೆ ಎದುರಾಗಿದ್ದಾರಾ ಎಂದು ಕೇಳಿದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧವೂ ವಾಗ್ದಾಳಿ ನಡೆಸಿದ ತಿಮ್ಮಾಪುರ, ಯತ್ನಾಳ ಅವರು ಎಲ್ಲರೊಂದಿಗೂ ಕುಸ್ತಿ ಹಿಡಿಯುತ್ತಾರೆ. ತಮ್ಮ ಪಕ್ಷದೊಂದಿಗೂ ಕುಸ್ತಿ ಹಿಡಿಯೋದ್ನ ಬಿಟ್ಟಿಲ್ಲ ಅಂಥ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ ಎಂದರು.