ಚುರುಮುರಿ ಭಟ್ಟಿಯಲ್ಲಿ ಶಾರ್ಟ್ ಸರ್ಕ್ಯೂಟ್
ಇಳಕಲ್ – ಇಲ್ಲಿನ ಸಜ್ಜನ್ ಸ್ಕೂಲ್ ಹತ್ತಿರ ಇರುವ ರಡ್ಡಿ ಚುರುಮರಿ ಬಟ್ಟಿಗೆ ಬೆಂಕಿ ತಗಲಿದ್ದು ರಾತ್ರಿ 03-15ರ ಸುಮಾರಿಗೆ ಗಸ್ತು ತಿರುಗುತ್ತಿದ್ದ ಪೊಲೀಸರು ಬೆಂಕಿಯನ್ನು ನೋಡಿ ತಕ್ಷಣ ಅಗ್ನಿಶಾಮಕ ದಳದವರಿಗೆ ತಿಳಿಸಿದ ಪರಿಣಾಮ ಎ 01 ಇಂಡಸ್ಟ್ರೀಸ್ ಚುರಮುರಿ ಬಟ್ಟಿಗೆ ಬೆಂಕಿ ತಗಲಿದ್ದು ಆಗಬಹುದಾದ ದೊಡ್ಡ ಬೆಂಕಿ
ಅನಾಹುತ ತಪ್ಪಿದಂತಾಗಿದೆ ರಮಣಾರಡ್ಡಿ ಎಂಬುವರಿಗೆ ಸೇರಿದ ಚುರುಮುರಿ ಭಟ್ಟಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ತೆಗಲಿತ್ತು ಪೊಲೀಸರು ತಕ್ಷಣ ಜಾಗೃತರಾದ ಪ್ರಯುಕ್ತ ಸುಟ್ಟು ಕರೆಯಲಾಗಬೇಕಾಗಿದ್ದ ಚುರುಮುರಿ ಬಟ್ಟಿ ಉಳಿದಂತಾಗಿದೆ ಅದೇ ಸಮಯಕ್ಕೆ ಸರಿಯಾಗಿ ಪೊಲೀಸರು ಗಸ್ತು ಹೋದಾಗ ಚುರಮುರಿ ಬಟ್ಟೆಯಲ್ಲಿ ಆಗಿದ್ದ ಬೆಂಕಿಯನ್ನು ಗಮನಿಸಿ ತಕ್ಷಣ ಅಗ್ನಿಶಾಮಕ ದಳಕ್ಕೆ ತಿಳಿಸಿದ ಪರಿಣಾಮ ಅನಾಹುತ ಒಂದು ತಪ್ಪಿದ್ದು ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿರುತ್ತಾರೆ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪ್ರಭಾರ ಠಾಣಾಧಿಕಾರಿ ಜಗದೀಶ ಗಿರಡ್ಡಿ ನೈತೃತ್ವದ ಸಿಬ್ಬಂದಿಯವರ ತಂಡದಲ್ಲಿ ಭೀಮಪ್ಪ ಒನಕಿಹಾಳ. ರಫೀಕ ವಾಲಿಕಾರ. ಮಾರುತಿ ಜಾಧವ. ಬಸವರಾಜ,ಶೀಲವಂತರ. ಸಂತೋಷ. ಕೆಲೂರು. ವಾಯ್ ಎಲ್ ಪೂಜಾರ. ರವರ ನೇತೃತ್ವದ ತಂಡ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.