ಪೊಲೀಸರು ಅಲರ್ಟ್: ಕೇಂದ್ರ ಕಾರಾಗ್ರಹ ಸ್ಫೋಟಿಸುವ ಬೆದರಿಕೆ ಕರೆ

0
13

ಬೆಳಗಾವಿ: ಬೆಂಗಳೂರು ಕಾರಾಗೃಹ ಹಾಗೂ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹ ಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬರು ಜೈಲಿನ ಉತ್ತರ ವಲಯ ಡಿಐಜಿಪಿ ಟಿ.ಪಿ ಶೇಷ ಅವರಿಗೆ ಬೆದರಿಕೆ ಕರೆ ಮಾಡಿದ್ದಾರೆ.
ಅಧಿಕಾರಿ ಟಿ.ಪಿ ಶೇಷ ಅವರ ಸರ್ಕಾರಿ ನಂಬರ್‌ಗೆ ಅನಾಮಧೇಯ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಹಿಂಡಲಗಾ ಜೈಲಿನಲ್ಲಿ ಗಲಭೆ ಸೃಷ್ಟಿಸಿ ಟಿ.ಪಿ ಶೇಷ ಮೇಲೆ ಹಲ್ಲೆ ಮಾಡುತ್ತೇನೆ. ಅವರು ವಾಸಿಸುವ ವಸತಿ ಗೃಹದ ಮೇಲೂ ಬಾಂಬ್ ಸ್ಫೋಟಿಸುತ್ತೇನೆ. ಜೈಲಿನ ಸಿಬ್ಬಂದಿಯ ಪರಿಚಯಸ್ಥನೆಂದು ಹೇಳಿರುವ ಅನಾಮಧೇಯ ವ್ಯಕ್ತಿ ಜಗದೀಶ್ ಗಸ್ತಿ, ಎಸ್.ಎಂ ಗೋಟೆ ಪರಿಚಯಸ್ಥರೆಂದು ಹೇಳಿದ್ದಾನೆ.
ಬೆಳಗಾವಿ ಜೈಲಿನ ಬಳಿ ಪೊಲೀಸರು ಫೋನ್ ಕರೆಯಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ ಹೆಸರು ಉಲ್ಲೇಖ ಮಾಡಿರುವ ಅಪರಿಚಿತ ವ್ಯಕ್ತಿ ತಾನು ಜೈಲಿನಲ್ಲಿರುವಾಗ ಬನ್ನಂಜೆ ರಾಜಾಗೆ ಸಹಾಯ ಮಾಡಿರುವುದಾಗಿ ಹೇಳಿದ್ದಾನೆ. ಇನ್ನು ಆ ವ್ಯಕ್ತಿಯಿಂದ ಕಾರಾಗೃಹ ಆಡಳಿತಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಕೇಸ್ ದಾಖಲು ಮಾಡಲಾಗಿದೆ. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಡಿಐಜಿಪಿ ಅವರು ಅನಾಮಧೇಯ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Previous article5 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ
Next articleಹಿರಿಯ ಪತ್ರಕರ್ತ ಜಿ ಎನ್ ರಂಗನಾಥ್ ರಾವ್ ನಿಧನ