ಪರೀಕ್ಷೆ ನಡೆಸುವಲ್ಲಿಯೂ ಗೊಂದಲ ಸೃಷ್ಟಿ

0
17

ಬೆಂಗಳೂರು: ಪ್ರಾಥಮಿಕ ಮಾಧ್ಯಮಿಕ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ನಡೆಸುವಲ್ಲಿಯೂ ಗೊಂದಲ ಸೃಷ್ಟಿಸಿದೆ ಎಂದು ಬಿಜೆಪಿ ಮುಖಂಡ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರಾಥಮಿಕ ಮಾಧ್ಯಮಿಕ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ನಡೆಸುವಲ್ಲಿಯೂ ಗೊಂದಲ ಸೃಷ್ಟಿಸಿದೆ.

ಈವರೆಗೂ ಒಪಿಎಸ್ ಜಾರಿ ಮಾಡಿಲ್ಲ, ಏಳನೇ ವೇತನ ಆಯೋಗದ ಶಿಫಾರಸು ಜಾರಿ ಮಾಡದೇ ಕೈಕಟ್ಟಿ ಕುಳಿತಿದ್ದಾರೆ. ಪದವೀಧರರು, ಶಿಕ್ಷಕರ ಬಗ್ಗೆ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಎನ್ ಪಿಎಸ್ ರದ್ದು ಮಾಡಿದೆ. ಆದರೆ, ಖಾಸಗಿ ಶಾಲೆ, ಕಾಲೇಜುಗಳಲ್ಲಿ ಎನ್‌ಪಿಎಸ್ ರದ್ದು ಮಾಡಲು ಧೈರ್ಯ ತೋರುತ್ತಿಲ್ಲ. ಇವರ ರಾಜಕೀಯ ಪ್ರೇರಿತ ನಡೆಯಿಂದಾಗಿ ಸರ್ಕಾರಿ ಶಾಲೆ, ಕಾಲೇಜು ಮಕ್ಕಳು ಎನ್‌ಪಿಎಸ್ ಶಿಕ್ಷಣ ಪದ್ಧತಿಯಿಂದ ವಂಚಿತರಾಗಿದ್ದಾರೆ.

ಭ್ರಷ್ಟಾಚಾರ, ಮತ ಬ್ಯಾಂಕ್‌ ರಾಜಕಾರಣದಲ್ಲಿ ಮಗ್ನವಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಶಿಕ್ಷಕರ ಬಗ್ಗೆ ಆಗಲಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಆಗಲಿ ಕಿಂಚಿತ್‌ ಕಾಳಜಿ ಇಲ್ಲ ಎನ್ನುವುದಕ್ಕೆ ಈ ಒಂದು ವರ್ಷದ ದುರಾಡಳಿತವೇ ಸಾಕ್ಷಿ ಎಂದಿದ್ದಾರೆ.

Previous articleಪರಿಷತ್ ಚುನಾವಣೆ: ಕಾಂಗ್ರೆಸ್ ಪ್ರಚಾರ ಪತ್ರದಲ್ಲಿ ಬಿಜೆಪಿ ನಾಯಕನ ಫೊಟೊ!
Next articleಭೌತಿಕ ವರ್ಗಾವಣೆ ಪತ್ರಕ್ಕೆ ಕಡಿವಾಣ